ಭೂಕುಸಿತದಿಂದ ಉಂಟಾದ ವಿನಾಶದ ವ್ಯಾಪ್ತಿಯನ್ನು ವೀಕ್ಷಿಸಿದ ಅವರು ಇದನ್ನು ‘ರಾಷ್ಟ್ರೀಯ ವಿಪತ್ತು‘ ಎಂದು ಕರೆದರು. ಹಾಗೇ ತುರ್ತು ಸಮಗ್ರ ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಜುಲೈ 30ರಂದು ಮುಂಡಕ್ಕೈ, ಚೂರಲ್‌ಮಲ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ 300ರ ಗಡಿ ದಾಟಿದೆ. ಇನ್ನೂ 350ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಭಾರಿ ಯಂತ್ರಗಳ ಮೂಲಕ ಕಲ್ಲುಬಂಡೆಗಳನ್ನು ತೆರುವುಗೊಳಿಸಿ, ಅವಶೇಷಗಳಡಿ ಸಿಲುಕಿರುವವರನ್ನು ಹೊರಕ್ಕೆ ತರಲು ರಕ್ಷಣಾ ತಂಡಗಳು ಎಡಬಿಡದೆ ಕಾರ್ಯಾಚರಣೆ ನಡೆಸುತ್ತಿದೆ.