ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌

Last Updated 11 ಫೆಬ್ರುವರಿ 2022, 14:06 IST
ಅಕ್ಷರ ಗಾತ್ರ

ನವದೆಹಲಿ: ‘ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ಈ ಕುರಿತು ಸಂಸತ್ತು ಮತ್ತು ಸಾರ್ವತ್ರಿಕವಾಗಿ ಚರ್ಚೆ ಆಗಬೇಕಾಗಿದೆ’ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್‌ ಶುಕ್ರವಾರ ಪ್ರತಿಪಾದಿಸಿದರು.

ಕರ್ನಾಟಕದಲ್ಲಿ ಆರಂಭವಾದ ಹಿಜಾಬ್‌ ವಿವಾದ ದೇಶವ್ಯಾಪಿ ಚರ್ಚೆಗೊಳಪಟ್ಟಿರುವ ಹೊತ್ತಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಹಿಜಾಬ್‌ ಕುರಿತ ಬೆಳವಣಿಗೆಗಳು ಕಳವಳಕಾರಿಯಾದುದು, ದೇಶದಲ್ಲಿ ಒಟ್ಟು ವಾತಾವರಣ ಹಾಳುಗೆಡಹುತ್ತಿದೆ’ ಎಂದು ಬಣ್ಣಿಸಿದರು.

‘ಕೆಲ ಮತ ಮಧ್ಯಸ್ಥಿಕೆದಾರರು ಇದ್ದಾರೆ. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ (ಹಿಜಾಬ್) ಅತಾರ್ಕಿಕವಾದ ಬೇಡಿಕೆಗಳನ್ನು ಬೆಂಬಲಿಸುತ್ತಿದ್ದಾರೆ. ಇಂಥವರು ಮತಕ್ಕಾಗಿ ಅಮಾಯಕ ಮಕ್ಕಳ ಜೀವನದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ರಸ್ತೆಗಳಿಂದ ಸಂಸತ್ತಿನವರೆಗೆ ಈ ಬಗ್ಗೆ ಚರ್ಚೆ ಆಗಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT