ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣದಲ್ಲಿ ಶೀಘ್ರ ಟಿಡಿಪಿಯ ಗತ ವೈಭವ ಮರುಕಳಿಸಲಿದೆ: ಸಿಎಂ ಚಂದ್ರಬಾಬು ನಾಯ್ಡು

Published : 7 ಜುಲೈ 2024, 13:44 IST
Last Updated : 7 ಜುಲೈ 2024, 13:44 IST
ಫಾಲೋ ಮಾಡಿ
Comments

ಹೈದರಾಬಾದ್‌: ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷವನ್ನು ಪುನರ್‌ರಚಿಸಲಾಗುವುದು. ಈ ಮೂಲಕ ಟಿಡಿಪಿಯು ಶೀಘ್ರದಲ್ಲೆ ತನ್ನ ಗತ ವೈಭವವನ್ನು ಮರಳಿ ಪಡೆಯಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಟಿಡಿಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾಲ್ಕು ದಶಕಗಳ ಹಿಂದೆ ಪಕ್ಷವು ತೆಲಂಗಾಣದಲ್ಲಿ ಜನ್ಮ ತಾಳಿದೆ ಮತ್ತು ಆದಷ್ಟು ಬೇಗ ಪಕ್ಷವನ್ನು ಪುನರ್‌ರಚಿಸಲಾಗುತ್ತದೆ’ ಎಂದು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮ್ಮ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಜನರಿಗೆ ನಾಯ್ಡು ಧನ್ಯವಾದ ತಿಳಿಸಿದರು.

‘ತೆಲುಗು ಜನರಿಗಾಗಿ ಸ್ಥಾಪನೆಗೊಂಡ ಟಿಡಿಪಿ ತೆಲಂಗಾಣದಲ್ಲಿ ಇರಬೇಕು. ಪಕ್ಷಕ್ಕಾಗಿ ಅನೇಕ ಜನರು ಕೆಲಸ ಮಾಡಿದ್ದಾರೆ. ಹಾಗಾಗಿ ಪಕ್ಷವನ್ನು ರಾಜ್ಯದಲ್ಲಿ ಪುನರ್‌ರಚಿಸಲಾಗುವುದು. ರಾಜ್ಯದಲ್ಲಿ ಪಕ್ಷಕ್ಕೆ ಗತ ವೈಭವವನ್ನು ತರಲು ಕೆಲಸ ಮಾಡಲಾಗುತ್ತದೆ. ರಾಜ್ಯದಲ್ಲಿನ ಯುವಕರು ಮತ್ತು ವಿದ್ಯಾವಂತರನ್ನು ಪಕ್ಷವು ಉತ್ತೇಜಿಸಲಿದೆ’ ಎಂದು ನಾಯ್ಡು ಹೇಳಿದ್ದಾರೆ.

2023ರ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆ ಮತ್ತು ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಹಲವು ಕಾರಣಗಳಿಂದಾಗಿ ತೆಲಂಗಾಣದಲ್ಲಿ ಟಿಡಿಪಿ ಸ್ಪರ್ಧಿಸಲಿಲ್ಲ. ಕಳೆದ ವರ್ಷದ ವಿಧಾನಸಭೆ ಚುನಾವಣೆಗೂ ಮೊದಲು ತೆಲಂಗಾಣ ಟಿಡಿಪಿ ಘಟಕದ ಅಧ್ಯಕ್ಷರಾಗಿದ್ದ ಕಸಾನಿ ಜ್ಞಾನೇಶ್ವರ್‌ ಅವರು ರಾಜೀನಾಮೆ ನೀಡಿದ ಬಳಿಕ ರಾಜ್ಯದಲ್ಲಿ ಪಕ್ಷ ನೆಲೆ ಕಳೆದುಕೊಂಡಿದೆ.

ನಿನ್ನೆ (ಶನಿವಾರ) ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರನ್ನು ಭೇಟಿ ಮಾಡಿದ ಸಿಎಂ ಚಂದ್ರಬಾಬು ನಾಯ್ಡು ಇತ್ಯರ್ಥವಾಗದ ರಾಜ್ಯ ವಿಭಜನೆ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT