ಭಾನುವಾರ, ಜನವರಿ 24, 2021
18 °C

ಮಧ್ಯಪ್ರದೇಶ: ನಕಲಿ ಮದ್ಯ ಸೇವಿಸಿ 11 ಮಂದಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಸೋಮವಾರ ನಕಲಿ ಮದ್ಯ ಸೇವಿಸಿ 11 ಮಂದಿ ಮೃತಪಟ್ಟಿದ್ದು, 8 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಕೆಲವು ಗ್ರಾಮಸ್ಥರು ಬಿಳಿ ಬಣ್ಣದ ಮದ್ಯ ಸೇವಿಸಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ’ ಎಂದು ಮೊರೆನಾದ ವರಿಷ್ಠ ಪೊಲೀಸ್‌ ಅಧಿಕಾರಿ ಅನುರಾಗ್‌ ಸುಜಾನಿಯಾ ಅವರು ಹೇಳಿದರು.

‘ನಕಲಿ ಮದ್ಯ ಸೇವನೆಯಿಂದಾಗಿ ಮನ್ಪುರ ಮತ್ತು ಪಹಾವಲಿ ಗ್ರಾಮದ 11 ಮಂದಿ ಸಾವಿಗೀಡಾಗಿದ್ದಾರೆ’ ಎಂಬ ಶಂಕೆಯಿದೆ ಎಂದು ಅವರು ತಿಳಿಸಿದರು.

‘ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿ ಬಂದ ಮೇಲೆಯೇ ಸಾವಿನ ನಿಖರ ಕಾರಣ ತಿಳಿಯಲಿದೆ’ ಎಂದು ಅಧಿಕಾರಿಗಳು ಹೇಳಿದರು.

‘ನಕಲಿ ಮದ್ಯ ಸೇವಿಸಿ ಜನರು ಮೃತಪಟ್ಟಿದ್ದಾರೆ ಎಂಬ ವಿಷಯ ಬಹಳ ಬೇಸರವನ್ನುಂಟು ಮಾಡಿದೆ. ಈ ಪ್ರಕರಣ ಸಂಬಂಧ ನಿರ್ಲಕ್ಷ್ಯ ತೋರಿದ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಬೇರೆ ತಂಡವನ್ನು ರಚಿಸಲಾಗಿದೆ’ ಎಂದು ರಾಜ್ಯ ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರು ಮಾಹಿತಿ ನೀಡಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಕಮಲ್‌ನಾಥ್ ಅವರು,‘ ರಾಜ್ಯದಲ್ಲಿ ನಕಲಿಮದ್ಯ ಮಾಫಿಯಾ ಬಹಳ ಹಾನಿಯನ್ನುಂಟು ಮಾಡುತ್ತಿದೆ. ಈ ಹಿಂದೆ ಉಜ್ಜೈನಿಯಲ್ಲಿ 16 ಜನರು ಮೃತಪಟ್ಟಿದ್ದರು. ಈಗ ಮೊರೆನಾದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಶಿವರಾಜ್‌ ಅವರೇ ಈ ರೀತಿ ಎಲ್ಲಿಯವರೆಗೆ ನಕಲಿ ಮದ್ಯ, ಜನರನ್ನು ಬಲಿ ಪಡೆಯುತ್ತದೆ’  ಎಂದು ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು