ಮಂಗಳವಾರ, ಜನವರಿ 19, 2021
21 °C

ಚೀನಾದಲ್ಲಿ ಸಿಲುಕಿರುವ 23 ನಾವಿಕರು ಜ.14ಕ್ಕೆ ಭಾರತಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚೀನಾ ವ್ಯಾಪ್ತಿಯ ಸಮುದ್ರದಲ್ಲಿ ಸಿಲುಕಿಕೊಂಡಿರುವ 23 ಭಾರತೀಯ ನಾವಿಕರು ಜ.14ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ಕೇಂದ್ರ ಸಚಿವ ಮನ್‌ಸುಖ್‌ ಮಾಂಡವೀಯ ಶನಿವಾರ ತಿಳಿಸಿದರು.

ಸರಕು ಸಾಗಣೆ ಹಡಗು ಎಂವಿ ಜಗ್‌ ಆನಂದ್‌ ಜಪಾನ್‌ನ ಇಬಾ ಕಡೆಗೆ ಯಾನಕ್ಕೆ ಸಜ್ಜಾಗಿದೆ ಎಂದು ಮಾಂಡವೀಯ ಹೇಳಿದರು. ಇಲ್ಲಿ ಹಡಗಿನ ಸಿಬ್ಬಂದಿ ಬದಲಾವಣೆ ಆಗಲಿದ್ದು, ಭಾರತೀಯ ನಾವಿಕರು ಜ.14ಕ್ಕೆ ಭಾರತಕ್ಕೆ ಆಗಮಿಸಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವ ಹಾಗೂ ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌ ಕಂಪನಿಯ ಮಾನವೀಯ ಕ್ರಮದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. ಸರಕನ್ನು ಇಳಿಸಲು ಅನುಮತಿ ನೀಡದೇ ಇದ್ದ ಕಾರಣ, ಚೀನಾ ವ್ಯಾಪ್ತಿಯ ಸಮುದ್ರದಲ್ಲೇ ಈ ಹಡಗು ಹಲವು ದಿನಗಳಿಂದ ಉಳಿದಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು