ನವದೆಹಲಿ: ಕಳೆದ ವರ್ಷ ಕೇಂದ್ರದ ಗೃಹ ಇಲಾಖೆಯಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ(ಸಿಎಪಿಎಫ್)36 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಆರು ವರ್ಷದಲ್ಲಿ ಸಿಎಪಿಎಫ್‌ನ 433 ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಉಲ್ಲೇಖಿಸಿದೆ.

ಆತ್ಮಹತ್ಯೆಗೆ ಶರಣಾದ 36 ಸಿಬ್ಬಂದಿಯ ಪೈಕಿ 14 ಸಿಬ್ಬಂದಿ ‘ಕೌಟುಂಬಿಕ ಸಮಸ್ಯೆ’ ಹಾಗೂ ಮೂವರು ‘ಸೇವೆಗೆ ಸಂಬಂಧಿಸಿದ ಸಮಸ್ಯೆ’ಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿದೆ. ಎಂಟು ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಮದುವೆಗೆ ಸಂಬಂಧಿಸಿದ ಸಮಸ್ಯೆಯಿಂದ ಒಬ್ಬ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಎಪಿಎಫ್ಏಳು ಕೇಂದ್ರೀಯ ಭದ್ರತಾ ಪಡೆಗಳಾದಗಡಿ ಭದ್ರತಾ ಪಡೆ(ಬಿಎಸ್‌ಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್), ಇಂಡೊ–ಟಿಬೆಟನ್ ಗಡಿ ಪೊಲೀಸ್(ಐಟಿಬಿಪಿ), ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ), ಅಸ್ಸಾಂ ರೈಫಲ್ಸ್ ಹಾಗೂ ಎನ್‌ಎಸ್‌ಜಿಯನ್ನು ಒಳಗೊಂಡಿದೆ.

ಗಡಿ ಭದ್ರತೆ ಹಾಗೂ ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವಸಿಎಪಿಎಫ್‌ನಲ್ಲಿ ಅಂದಾಜು 9.23 ಲಕ್ಷ ಸಿಬ್ಬಂದಿಯಿದ್ದಾರೆ. ಸಿಎಪಿಎಫ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿಯ ಸಂಖ್ಯೆಯನ್ನಷ್ಟೇ ಎನ್‌ಸಿಆರ್‌ಬಿ ಉಲ್ಲೇಖಿಸಿದ್ದು, ಆಯಾ ಪಡೆಗಳ ವರದಿಯನ್ನು ನೀಡಿಲ್ಲ.

ಆತ್ಮಹತ್ಯೆ ಪ್ರಕರಣಗಳು

2018–28

2017–60

2016–74

2015–60

2014–175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.