ಶನಿವಾರ, ಜುಲೈ 2, 2022
25 °C

ಗುಜರಾತ್‌ನಲ್ಲಿ ದಲಿತರ ಮದುವೆ ಮೆರವಣಿಗೆ ಮೇಲೆ ದಾಳಿ: ನಾಲ್ವರಿಗೆ ಗಾಯ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ ಸಮೀಪದ ಡಂಗರ್ವ ಗ್ರಾಮದ ದಲಿತ ಯುವತಿಯೊಬ್ಬರ ಮದುವೆ ಮೆರವಣಿಗೆಯ ಮೇಲೆ ಠಾಕೂರ್ ಸಮುದಾಯದ ಹಲವು ಸದಸ್ಯರು ಗುರುವಾರ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಡಂಗರ್ವ ಗ್ರಾಮಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಮದುವೆ ಮುಗಿದ ನಂತರ ವಧುವಿನ ಕುಟುಂಬವು ಎಫ್‌ಐಆರ್ ದಾಖಲಿಸಲು ಉದ್ದೇಶಿಸಿದೆ.

ವಧು ತಾರಾ ಜಗದೀಶ್ ಪರ್ಮಾರ್ ಮತ್ತು ರಾಹುಲ್ ಹರೇಶ್ ಪರ್ಮಾರ್ ಅವರ ವಿವಾಹ ಗುರುವಾರ ಮಧ್ಯಾಹ್ನ ನಿಗದಿಯಾಗಿತ್ತು. ಮದುವೆಯ ಮೆರವಣಿಗೆ ಗ್ರಾಮದ ಹೊರವಲಯವನ್ನು ತಲುಪಿದಾಗ, ಸುಮಾರು 40 ಜನರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ದಾಳಿ ಮಾಡಿದರು. ಈ ಕುರಿತು ವಧುವಿನ ತಂದೆ ಜಗದೀಶ್ ಪರ್ಮಾರ್ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು