ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ 4.3 ತೀವ್ರತೆಯ ಭೂಕಂಪ

Last Updated 26 ಫೆಬ್ರವರಿ 2023, 12:31 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪ ಸಂಭವಿಸಿರುವುದು ವರದಿಯಾಗಿದೆ.

ಇಂದು ಮಧ್ಯಾಹ್ನ 3:21ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್) ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

ಭೂಕಂಪದ ಕೇಂದ್ರಬಿಂದು ಗುಜರಾತ್​ನ ರಾಜಕೋಟ್​ನಿಂದ ವಾಯವ್ಯ ದಿಕ್ಕಿಗೆ (ನಾರ್ತ್ ವೆಸ್ಟ್) 270 ಕಿಮೀ ದೂರದ ಸ್ಥಳದಲ್ಲಿ ಇತ್ತು. ನೆಲದಿಂದ 10 ಕಿಮೀ ಆಳದಲ್ಲಿ ಗುರುತು ಮಾಡಲಾಗಿದೆ. ಭೂಕಂಪದಿಂದ ಯಾವುದೇ ಅನಾಹುತವಾದ ವರದಿ ಬಂದಿಲ್ಲ.

ಕಳೆದ ವಾರ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವ ಆಗಿತ್ತು ಎಂದು ಇನ್‌ಸ್ಟಿಟ್ಯೂಟ್ ಆಫ್ ಸಿಸ್ಮಾಲಾಜಿಕಲ್ ರಿಸರ್ಚ್‌ನ (ಐಎಸ್‌ಆರ್‌) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT