ಶನಿವಾರ, ಜನವರಿ 28, 2023
20 °C

ಉತ್ತರಪ್ರದೇಶ| ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ: ಐವರು ಮಕ್ಕಳು ಸೇರಿ 6 ಜನ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಹ್ರೈಚ್, ಉತ್ತರಪ್ರದೇಶ (ಪಿಟಿಐ): ಬಹ್ರೈಚ್‌ ಜಿಲ್ಲೆಯ ನಾನ್ಪುರ ವ್ಯಾಪ್ತಿಯ ಮಸುಪುರ್‌ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಗಾಡಿಯಲ್ಲಿದ್ದ ಕಬ್ಬಿಣದ ಸರಳೊಂದು ಹೈಟೆನ್ಶನ್‌ ತಂತಿಗೆ ಸ್ಪರ್ಶಿಸಿದ್ದರಿಂದ ಐವರು ಮಕ್ಕಳ ಸಹಿತ ಆರು ಮಂದಿ ಮೃತಪಟ್ಟಿದ್ದಾರೆ.

‘ವೈರ್‌ ಸ್ಪರ್ಶಿಸುತ್ತಿದ್ದಂತೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದ್ದಾಗ ಇನ್ನೂ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಸುಫೈನ್‌, ಇಲಿಯಾಸ್, ತಬ್ರೆಜ್‌, ಅಶ್ರಫ್‌ ಅಲಿ, ಅರಾಫತ್‌ ಮತ್ತು ಶಫೀಕ್‌ ಎಂದು ಗುರುತಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ (ಗ್ರಾಮೀಣ) ಅಶೋಕ್‌ ಕುಮಾರ್‌ ಮಾಹಿತಿ ನೀಡಿದರು.

‘ಈ ಅವಘಡಕ್ಕೆ ಯಾರೂ ಕಾರಣವಾಗಿಲ್ಲರುವುದರಿಂದ ಶವಗಳ ಮರಣೋತ್ತರ ಪರೀಕ್ಷೆ ಮಾಡಿಸುವುದು ಬೇಡವೆಂದು ಸಾವಿಗೀಡಾದವರ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕೇಶವ್‌ ಕುಮಾರ್‌ ಚೌದರಿ ಹೇಳಿದರು.‌

ಇದೇ ವೇಳೆ, ವಿದ್ಯುತ್‌ ಸ್ಪರ್ಶದಿಂದ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು