ವೆಲ್ಲೂರು: ಇಲ್ಲಿನ ವೆಲ್ಲೂರು ಕೋಟೆ ಪ್ರವೇಶಿಸುತ್ತಿದ್ದ ಮಹಿಳೆಯೊಬ್ಬರನ್ನು ತಡೆದು ಬಲವಂತವಾಗಿ ಹಿಜಾಬ್ ತೆಗಿಸಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ 6 ಮಂದಿಯ ಪೈಕಿ ಓರ್ವ ಬಾಲಪರಾಧಿಯೂ ಇದ್ದು, ಆತನನ್ನು ಮನಪರಿವರ್ತನಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇಮ್ರಾನ್ ಪಾಷ (22), ಅಶ್ರಫ್ ಬಾಷ (20), ಮೊಹಮ್ಮದ್ ಫೈಸಲ್ (23), ಸಂತೋಷ್ (23), ಇಬ್ರಾಹಿಂ ಬಾಷ (24), ಪ್ರಶಾಂತ್ (20) ಬಂಧಿತರು.
ಬಂಧಿತ ಯುವಕರ ಪೈಕಿ ಬಹುತೇಕರು ಆಟೋ ಚಾಲಕರಾಗಿದ್ದು, ಕೋಟೆಗೆ ಹಿಜಾಬ್ ಧರಿಸಿ ಬಂದಿದ್ದ ಇನ್ನೂ ಮೂವರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ. ಮಾರ್ಚ್ 27 ರಂದು ಈ ಘಟನೆ ನಡೆದಿತ್ತು.
ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಪೊಲೀಸ್ ಬೂತ್ ಸ್ಥಾಪಿಸಲಾಗಿದ್ದು, ಶಾಶ್ವತವಾಗಿ ಅಲ್ಲಿ ಇರಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಘಟನೆಯ ಹಿಂದಿನ ಉದ್ದೇಶ ವಿಚಾರಣೆಯ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.