ಲಾಸ್ಏಂಜಲೀಸ್: ಕೊರೊನಾ ಸಾಂಕ್ರಾಮಿಕದ ನಡುವೆ ಪ್ರತಿಷ್ಠಿತ 93ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಅಮೆರಿಕದ ಹಾಲಿವುಡ್ನ ಡಾಲ್ಬಿ ಥಿಯೇಟರ್ ಮತ್ತು ಲಾಸ್ಏಂಜಲೀಸ್ನ ಯೂನಿಯನ್ ಸ್ಟೇಷನ್ನಲ್ಲಿ ನಡೆಯಿತು.

ಕ್ಲೋಯ್ ಝಾವೊ ನಿರ್ದೇಶನದ ‘ನೋಮ್ಯಾಡ್ಲ್ಯಾಂಡ್‘ ಸಿನೆಮಾ, ‘ಉತ್ತಮ ಚಲನಚಿತ್ರ‘ ಪುರಸ್ಕಾರ ಪಡೆದರೆ, ಆ ಸಿನಿಮಾದ ನಿರ್ದೇಶಕಿ ಕ್ಲೋಯ್ ಝಾವೊ ‘ಅತ್ಯುತ್ತಮ ನಿರ್ದೇಶಕ‘ ಪ್ರಶಸ್ತಿ ಮುಡಿಗೇರಿಸಿ ಕೊಂಡರು. ಈ ಸಿನಿಮಾದ ಪ್ರಮುಖ ತಾರಾಗಣದಲ್ಲಿರುವ ಫ್ರಾನ್ಸಿಸ್ ಮೆಕ್ಡೊರ್ಮಾಂಡ್ ‘ಉತ್ತಮ ನಟಿ ಪುರಸ್ಕಾರ‘ ಸ್ವೀಕರಿಸಿದರು.

2009ರಲ್ಲಿ ಕ್ಯಾಥರಿನ್ ಬಿಗೆಲೊ ಅವರ ‘ಹರ್ಟ್ ಲಾಕರ್‘ ಗೆಲುವಿನ ನಂತರ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಿರ್ದೇಶಕ ವಿಭಾಗದ ಟ್ರೋಫಿಯನ್ನು ಪಡೆದ ಏಕೈಕ ಮಹಿಳೆ ಝಾವೊ.

ಖ್ಯಾತ ಬಾಲಿವುಡ್ ತಾರೆ ಆಂಥೊನಿ ಹಾಪ್ಕಿನ್ಸ್ ‘ದಿ ಫಾದರ್‘ ಚಲನ ಚಿತ್ರದ ನಟನೆಗಾಗಿ ‘ಉತ್ತಮ ನಟ‘ ಪುರಸ್ಕಾರ ಪಡೆದಿದ್ದಾರೆ. ಮ್ಯಾಡ್ಸ್ ಮಿಕೆಲ್ಸೆನ್ ಅಭಿನಯದ ಡ್ಯಾನಿಶ್ ಚಿತ್ರ ‘ಅನದರ್ ರೌಂಡ್‘ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪಡೆದಿದೆ.

ಖ್ಯಾತ ದಕ್ಷಿಣ ಕೊರಿಯಾದ ಹಿರಿಯ ತಾರೆ ಯೂಹ್–ಜಂಗ್ ಯೂನ್ ಅವರು, ‘ಮಿನಾರಿ‘ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಕೊರಿಯಾದ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

73 ವರ್ಷದ ಯೂನ್, ‘ಸಾಯೋನಾರಾ‘ (1957) ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟಿ ಮಿಯೋಶಿ ಉಮೆಕಿ ನಂತರ ಅತ್ಯುತ್ತಮ ಪೋಷಕ ನಟಿ ಆಸ್ಕರ್ ಪ್ರಶಸ್ತಿ ಪಡೆದ ಎರಡನೇ ಏಷ್ಯಾದ ಮಹಿಳೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.