ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಶೇ 97ರಷ್ಟು ರೋಗಿಗಳಲ್ಲಿ ಓಮೈಕ್ರಾನ್‌ ಸೋಂಕು

Last Updated 9 ಫೆಬ್ರುವರಿ 2022, 15:14 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಜನವರಿ 1ರಿಂದ ಫೆಬ್ರುವರಿ 8 ವರೆಗೆ ನಡೆಸಿರುವ ಸಮೀಕ್ಷೆ ಪ್ರಕಾರ, ಕೋವಿಡ್‌–19 ರೋಗಿಗಳ ಪೈಕಿ ಶೇ 97ರಷ್ಟು ಜನರಲ್ಲಿ ರೂಪಾಂತರ ತಳಿ ಓಮೈಕ್ರಾನ್‌ನ ಸೋಂಕು ಇರುವುದು ಕಂಡುಬಂದಿದೆ.

ರಾಜ್ಯದಲ್ಲಿ ಓಮೈಕ್ರಾನ್‌ ತಳಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕಳೆದ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಈ ತಳಿಯ ಸೋಂಕಿನ ಪ್ರಕರಣಗಳು ಇರಲಿಲ್ಲ. ಆದರೆ, ಜನವರಿ ಕೊನೆ ವಾರದ ವೇಳೆ ಈ ತಳಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಶೇ 97ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಇದೇ ಸಮೀಕ್ಷೆ ಹೇಳುತ್ತದೆ.

ರಾಜ್ಯದಲ್ಲಿ ವರದಿಯಾದ ಪ್ರಕರಣಗಳ ಪೈಕಿ, ಕಳೆದ ಡಿಸೆಂಬರ್ 14ರ ವೇಳೆಗೆ ಓಮೈಕ್ರಾನ್‌ ತಳಿ ಸೋಂಕಿನ ಪ್ರಕರಣಗಳ ಪ್ರಮಾಣ ಶೇ 13 ಇತ್ತು. ಡಿಸೆಂಬರ್‌ 21ರ ಹೊತ್ತಿಗೆ ಈ ಪ್ರಮಾಣ ಶೇ 18ಕ್ಕೆ ಏರಿ, ನಾಲ್ಕು ದಿನಗಳ ನಂತರ ಭಾರಿ ಹೆಚ್ಚಳವಾಗಿ ಶೇ 63ಕ್ಕೆ ಏರಿಕೆಯಾಯಿತು. ಡಿಸೆಂಬರ್ 28ಕ್ಕೆ ಈ ಸೋಂಕಿನ ಪ್ರಕರಣಗಳ ಪ್ರಮಾಣ ಶೇ 51ಕ್ಕೆ ಇಳಿಕೆಯಾಯಿತು ಎಂದು ಇದೇ ಸಮೀಕ್ಷೆ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT