ನವದೆಹಲಿ: ದೆಹಲಿ ಮಹಾನಗರಪಾಲಿಕೆ ಗೆದ್ದಿರುವ ಎಎಪಿ ವಿರುದ್ಧ ಬಿಜೆಪಿಯು ಕುದುರೆ ವ್ಯಾಪಾರದ ಆರೋಪ ಮಾಡಿದೆ.
ಎಎಪಿ ಸೇರಲು ನನಗೆ ಆಮಿಷವೊಡ್ಡಲಾಯಿತು ಎಂದು ಪಾಲಿಕೆಯ ಬಿಜೆಪಿ ಸದಸ್ಯೆ ಡಾ ಮೋನಿಕಾ ಪಂತ್ ಎಂಬುವವರು ಆರೋಪಿಸಿದ್ದಾರೆ.
‘ಶಿಖಾ ಗರ್ಗ್ ಎಂಬುವವರು ನನ್ನನ್ನು ಸಂಪರ್ಕಿಸಿ ಮೇಯರ್ ಚುನಾವಣೆಯಲ್ಲಿ ಎಎಪಿ ಬೆಂಬಲಿಸುವಂತೆ ಕೇಳಿದರು. ಬೆಂಬಲ ಪಡೆಯಲು ಸ್ಥಾನಮಾನದ ಆಮಿಷವೊಡ್ಡಿದರು’ ಎಂದು ಮೋನಿಕಾ ಹೇಳಿದ್ದಾರೆ.
ಈ ಬಗ್ಗೆ ನಾವು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡುತ್ತೇವೆ ಎಂದು ಪಕ್ಷದ ಮುಖಂಡ ಹರೀಶ್ ಖೌರಾನಾ ಹೇಳಿದ್ದಾರೆ.
ಪಾಲಿಕೆಯಲ್ಲಿ ಬಹುಮತ ಪಡೆದಿರುವ ಎಎಪಿಯೇ ಮೇಯರ್ ಸ್ಥಾನ ಪಡೆಯಲಿದೆ ಎಂದು ದೆಹಲಿಯ ಬಿಜೆಪಿ ಅಧ್ಯಕ್ಷ ಅದೇಶ್ ಗುಪ್ತಾ ಹೇಳಿದ್ದರು. ಅಲ್ಲದೇ, ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದೂ ಸ್ಪಷ್ಟಪಡಿಸಿದ್ದರು. ಈ ಮಧ್ಯೆ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿದೆ.
250 ಸದಸ್ಯಬಲದ ದೆಹಲಿ ಮುನಿಸಿಪಲ್ ಕಾರ್ಪೊರೇಷನ್‌ನಲ್ಲಿ ಎಎಪಿ 134 ಸ್ಥಾನಗಳನ್ನು ಗೆದ್ದಿದ್ದು, ಆಡಳಿತ ನಡೆಸಲು ಸಜ್ಜಾಗಿದೆ. ಬಿಜೆಪಿ 104 ಸ್ಥಾನಗಳನ್ನು ಪಡೆದಿದ್ದು, ಅಧಿಕಾರದಿಂದ ಕೆಳಗಿಳಿದಿದೆ. ಕಾಂಗ್ರೆಸ್9 ಸ್ಥಾನಗಳಲ್ಲಿ ಜಯಗಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.