ಸೋಮವಾರ, ಆಗಸ್ಟ್ 8, 2022
21 °C
2017ರಿಂದ ಖಾಲಿ ಇದ್ದ ಹುದ್ದೆ

ನಟ ಪರೇಶ್‌ ರಾವಲ್ ಎನ್‌ಎಸ್‌ಡಿ ಮುಖ್ಯಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಖ್ಯಾತ ನಟ ಪರೇಶ್‌ ರಾವಲ್‌ ಅವರನ್ನು ಭಾರತದ ಪ್ರಧಾನ ರಂಗಭೂಮಿ ಸಂಸ್ಥೆಯಾದ ರಾಷ್ಟ್ರೀಯ ನಾಟಕ ಶಾಲೆ(ಎನ್‌ಎಸ್‌ಡಿ) ಮುಖ್ಯಸ್ಥರನ್ನಾಗಿ ಸರ್ಕಾರವು ಗುರುವಾರ ನೇಮಕ ಮಾಡಿದೆ. 

 2017ರಿಂದ ಈ ಹುದ್ದೆ ಖಾಲಿ ಇತ್ತು. ರಾಷ್ಟ್ರಪತಿ ಭವನವು ಪರೇಶ್‌ ರಾವಲ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ‘ಎನ್‌ಎಸ್‌ಡಿಯ ವಿದ್ಯಾರ್ಥಿಗಳು ಹಾಗೂ ಕಲಾವಿ
ದರು ಇವರ ಅನುಭವದ ಲಾಭ ಪಡೆಯಲಿದ್ದಾರೆ ಎನ್ನುವ ಭರವಸೆ ಇದೆ. ಪರೇಶ್‌ ರಾವಲ್‌ ಅವರಿಗೆ ಅಭಿನಂದನೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ಟ್ವೀಟ್‌ ಮಾಡಿದ್ದಾರೆ.

65 ವರ್ಷದ ರಾವಲ್‌, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ‘ಇದೊಂದು ಸವಾಲಿನ ಹಾಗೂ ಬಹಳ ಸಂತೋಷದ ಕೆಲಸ. ನನಗೆ ಈ ಕ್ಷೇತ್ರದಲ್ಲಿ ಅನುಭವವಿದೆ ಹೀಗಾಗಿ ನಾನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ’ ಎಂದು ಪರೇಶ್‌ ರಾವಲ್‌ ತಿಳಿಸಿದ್ದಾರೆ. ‘ಹೇರಾ ಫೇರಿ’, ‘ಅತಿಥಿ ತುಮ್‌ ಕಬ್‌ ಜಾವೋಗೆ’, ‘ಓ ಮೈ ಗಾಡ್‌’ ಮುಂತಾದ ಚಿತ್ರಗಳಲ್ಲಿ ಪರೇಶ್‌ ರಾವಲ್‌ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.