ಗುರುವಾರ , ಡಿಸೆಂಬರ್ 1, 2022
27 °C

ನಟ ವಿಕ್ರಂ ಗೋಖಲೆ ನಿಧನರಾಗಿಲ್ಲ, ಉಸಿರಾಡುತ್ತಿದ್ದಾರೆ: ಪತ್ನಿ, ಮಗಳು ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಕಿರುತೆರೆ ಹಾಗೂ ಚಲನಚಿತ್ರ ನಟ ವಿಕ್ರಂ ಗೋಖಲೆ (82) ಅವರು ಬುಧವಾರ ತಡರಾತ್ರಿ ನಿಧನರಾಗಿದ್ದಾರೆ ಎಂಬ ವದಂತಿಯನ್ನು ಅವರ ಮಗಳು ಹಾಗೂ ಪತ್ನಿ ತಳ್ಳಿಹಾಕಿದ್ದಾರೆ. ವಿಕ್ರಂ ಅವರಿಗೆ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಅವರು ಉಸಿರಾಡುತ್ತಿದ್ದಾರೆ ಎಂದು ವಿಕ್ರಂ ಪತ್ನಿ ವೃಶಾಲಿ ಹಾಗೂ ಮಗಳು ತಿಳಿಸಿದ್ದಾರೆ.

ವಿಕ್ರಂ ಗೋಖಲೆ ಅವರು ನಿಧನರಾಗಿಲ್ಲ. ಯಾರೂ ವದಂತಿ ಹಬ್ಬಿಸಬಾರದು ಎಂದು ಮಗಳು ಮನವಿ ಮಾಡಿದ್ದಾರೆ. ವಿಕ್ರಂ ಅವರು ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

 

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಬುಧವಾರ ಸಂಜೆ ಇಲ್ಲಿನ ದೀನಾನಾಥ್‌ ಮಂಗೇಶ್ಕರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಕ್ರಂ ಅವರು ಬಾಲಿವುಡ್‌ ಹಾಗೂ ಮರಾಠಿಯ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. 1990ರಲ್ಲಿ ತೆರೆಕಂಡಿದ್ದ ಅಮಿತಾಬ್‌ ಬಚ್ಚನ್‌ ಮುಖ್ಯ ಭೂಮಿಕೆಯ ‘ಅಗ್ನಿಪಥ್’, ಸಲ್ಮಾನ್‌ ಖಾನ್‌ ಹಾಗೂ ಐಶ್ವರ್ಯ ರೈ ಬಚ್ಚನ್‌ ಅಭಿನಯದ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಅವರು ನಟಿಸಿದ್ದ ಪ್ರಮುಖ ಚಿತ್ರಗಳಾಗಿವೆ. ಅವರು ಅಭಿನಯಿಸಿದ್ದ ಮರಾಠಿಯ ‘ಗೋದಾವರಿ’ ಚಿತ್ರ ಇತ್ತೀಚೆಗೆ ತೆರೆಕಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು