ಶನಿವಾರ, ಡಿಸೆಂಬರ್ 3, 2022
26 °C

ಬಲಿಷ್ಠ ನಾಯಕ ಇಲ್ಲದಿದ್ದರೆ ಅಫ್ತಾಬ್‌ನಂಥವರು ಅಲ್ಲಲ್ಲಿ ಹುಟ್ಟುತ್ತಾರೆ: ಹಿಮಾಂತ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣ ಇದೀಗ ಗುಜರಾತ್‌ ಚುನಾವಣೆಯ ವಸ್ತುವಾಗಿದೆ.

‘ದೇಶಕ್ಕೆ ಬಲಿಷ್ಠ ನಾಯಕ ಇಲ್ಲದೇ ಹೋದರೆ ಅಫ್ತಾಬ್‌ನಂಥವರು ಪ್ರತೀ ನಗರದಲ್ಲಿ ಹುಟ್ಟುತ್ತಾರೆ‘ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಗುಜರಾತ್‌ನ ಕಛ್‌ನಲ್ಲಿ ಅವರು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅಫ್ತಾಬ್‌, ಶ್ರದ್ಧಾ ಸಹೋದರಿಯನ್ನು ಮುಂಬೈನಿಂದ ಕರೆಸಿ, ಲವ್‌ ಜಿಹಾದ್‌ ಹೆಸರಿನಲ್ಲಿ 35 ತುಂಡು ಮಾಡಿದ. ಬಳಿಕ ಆ ದೇಹವನ್ನು ಫ್ರಿಡ್ಜ್‌ನಲ್ಲಿ ಇಟ್ಟ. ಶ್ರದ್ಧಾಳ ದೇಹ ಫ್ರಿಡ್ಜ್‌ನಲ್ಲಿ ಇರುವಾಗಲೇ, ಇನ್ನೊಬ್ಬಳನ್ನು ಅಲ್ಲಿಗೆ ಕರೆ ತಂದಿದ್ದ. ದೇಶಕ್ಕೆ ಒಬ್ಬ ಬಲಿಷ್ಠ ನಾಯಕ ಇಲ್ಲದೇ ಹೋದರೆ, ಯಾರು ದೇಶವನ್ನು ತಾಯಿ ಎಂದು ಪರಿಗಣಿಸುವುದಿಲ್ಲವೋ, ಈ ಥರದ ಅಫ್ತಾಬ್‌ಗಳು ಪ್ರತೀ ಪಟ್ಟಣದಲ್ಲಿ ಹುಟ್ಟುತ್ತಾರೆ. ಹೀಗಾದರೆ ನಮ್ಮ ಸಮಾಜವನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ‘ ಎಂದು ಶರ್ಮಾ ಹೇಳಿದ್ದಾರೆ.

‘ಹೀಗಾಗಿ, ಮತ್ತೆ 2024ರಲ್ಲಿ, ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದು ಮುಖ್ಯ‘ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು