ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದ್ರೋಗಿಗಳಿಗೆ ಉಚಿತ ಡ್ರಾಪ್ ಸೇವೆ ಆರಂಭಿಸಿದ ಏಮ್ಸ್ ಆಸ್ಪತ್ರೆ

Last Updated 21 ಜನವರಿ 2023, 11:06 IST
ಅಕ್ಷರ ಗಾತ್ರ

ನವದೆಹಲಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವ ಹೃದ್ರೋಗಿಗಳಿಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯು (ಏಮ್ಸ್‌) ಮನೆಯವರೆಗೂ ಉಚಿತ ಡ್ರಾಪ್ ಸೇವೆಯನ್ನು ಆರಂಭಿಸಿದೆ.

ಕಾರ್ಡಿಯೊ ನ್ಯೂರೊ ಸೈನ್ಸ್(ಸಿಎನ್‌ಸಿ) ಕೇಂದ್ರದಿಂದ ಬಿಡುಗಡೆಯಾಗುವ ರೋಗಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ಖಾಸಗಿ ವಾರ್ಡ್ ಮತ್ತು ಡೇ ಕೇರ್ ರೋಗಿಗಳಿಗೆ ಈ ಸೌಲಭ್ಯ ಸಿಗುವುದಿಲ್ಲ ಎಂದು ಏಮ್ಸ್ ಆಡಳಿತ ಮಂಡಳಿ ತಿಳಿಸಿದೆ.

ದೆಹಲಿ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಈ ಸೌಲಭ್ಯ ಲಭ್ಯವಿದ್ದು, ಎನ್‌ಸಿಆರ್ ವಲಯಕ್ಕೆ ಇನ್ನಷ್ಟೆ ವಿಸ್ತರಿಸಬೇಕಿದೆ.

ಬೆಳಿಗ್ಗೆ 10ರಿಂದ 6 ಗಂಟೆವರೆಗೆ ಡ್ರಾಪ್ ಸೇವೆ ಲಭ್ಯವಿದ್ದು, ಮೊದಲು ಬಂದವರಿಗೆ ಮೊದಲು ಡ್ರಾಪ್ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ನಮೂದಿಸಿದ ಮನೆಯ ವಿಳಾಸಕ್ಕೆ ಮಾತ್ರ ಡ್ರಾಪ್ ಸಿಗಲಿದ್ದು, ಬೇರೆ ವಿಳಾಸಕ್ಕೆ ಸೇವೆ ಲಭ್ಯವಿರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

‘ಇದು ಆ್ಯಂಬುಲೆನ್ಸ್ ಸೇವೆ ಅಲ್ಲ. ಹಾಗಾಗಿ, ಹಾಸಿಗೆ ಹಿಡಿದಿರುವವರಿಗೆ ಈ ಸೇವೆ ನೀಡಲಾಗುವುದಿಲ್ಲ. ರೋಗಿ ಜೊತೆ ಒಬ್ಬ ಅಟೆಂಡೆಂಟ್ ಪ್ರಯಾಣಿಸಲು ಅವಕಾಶವಿದೆ’ ಎಂದು ಪ್ರಮಾಣೀಕೃತ ಕಾರ್ಯಾಚರಣಾ ವಿಧಾನದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT