ಬುಧವಾರ, ನವೆಂಬರ್ 25, 2020
25 °C

ಬಿಜೆಪಿಯ ಬಿ ಟೀಂ ಎಂದವರಿಗೆ ಬಿಹಾರದಲ್ಲಿ ಎಐಎಂಐಎಂ ಹೊಡೆತ ನೀಡಿದೆ: ಸಂಸದ ಜಲೀಲ್ 

ಪಿಟಿಐ Updated:

ಅಕ್ಷರ ಗಾತ್ರ : | |

ಔರಂಗಬಾದ್ :ಎಐಎಂಐಎಂ ಬಿಜೆಪಿಯ ಬಿ ಟೀಂ ಎಂದು ಆರೋಪಿಸಿದವರಿಗೆ ಬಿಹಾರ ಚುನಾವಣೆ ಫಲಿತಾಂಶ ಹೊಡೆತ ನೀಡಿದೆ ಎಂದು ಎಐಎಂಐಎಂ ಪಕ್ಷದ ಲೋಕಸಭಾ ಸದಸ್ಯ ಇಮ್ತಿಯಾಜ್ ಜಲೀಲ್  ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ  ಐದು ಸೀಟುಗಳನ್ನು ಗೆದ್ದುಕೊಂಡಿದೆ.

ಎಐಎಂಐಎಂ ಪಕ್ಷವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್  ಇದು ಬಿಜೆಪಿ ಬಿ ಟೀಂ ಎಂದು ಹೇಳಿತ್ತು.

ಫಲಿತಾಂಶ ಘೋಷಣೆಯಾದ ನಂತರ ಜಲೀಲ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಅಜಾದ್ ಚೌಕ್‌ನಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.

ಬಿಹಾರದ ಸೀಮಾಂಚಲ್ ಪ್ರದೇಶದ ಜನರು ಎಐಎಂಐಎಂ  ಮತ್ತು ಅಸಾದುದ್ದೀನ್ ಒವೈಸಿ ಮೇಲೆ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದಗಳು. ನಮ್ಮನ್ನು ಟೀಕಿಸಿದವರ ಮುಖಕ್ಕೆ ಹೊಡೆದಂತಿದೆ ಈ ಚುನಾವಣಾ ಫಲಿತಾಂಶ ಎಂದು ಜಲೀಲ್ ವಿಡಿಯೊ ಸಂದೇಶದಲ್ಲಿ  ಹೇಳಿದ್ದಾರೆ.

ಬಿಜೆಪಿಯ ಬಿ ಟೀಂ ಎಂದು ಅವರು ನಮ್ಮ  ಮೇಲೆ ಆರೋಪ ಹೊರಿಸಿದರು. ಆದರೆ ಬಿಹಾರದ ಜನರು ಶ್ರದ್ಧೆ ಮತ್ತು ನಂಬಿಕೆಯನ್ನು ತೋರಿಸಿದ್ದಾರೆ. ಇದು ಆರಂಭ ಮಾತ್ರ  ಎಂದಿದ್ದಾರೆ ಜಲೀಲ್.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು