ಗುರುವಾರ , ಮೇ 19, 2022
21 °C

ರಷ್ಯಾಕ್ಕೆ ವಿಮಾನ ಸೇವೆ ರದ್ದು ಮಾಡಿದ ಏರ್‌ ಇಂಡಿಯಾ: ಕಾರಣವೇನು ಗೊತ್ತೆ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏರ್ ಇಂಡಿಯಾ ಗುರುವಾರ ದೆಹಲಿ-ಮಾಸ್ಕೋ ನಡುವಿನ ಸೇವೆಯನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ವಾಯು ಪ್ರದೇಶದಲ್ಲಿ ವಿಮಾನಗಳ ವಿಮೆ ಮಾನ್ಯಗೊಳ್ಳದ ಕಾರಣಕ್ಕೆ ಸೇವೆ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.

ವಿಮಾನಗಳ ವಿಮಾ ಸೇವೆಯನ್ನು ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳ ಮೂಲದ ಕಂಪನಿಗಳು ಒದಗಿಸುತ್ತವೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವು ಬಗೆಯ ನಿರ್ಬಂಧಗಳನ್ನು ಹೇರಿವೆ.

ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ನಂತರ ಪಾಶ್ಚಾತ್ಯ ದೇಶಗಳು ತಮ್ಮ ವಾಯುಪ್ರದೇಶದಲ್ಲಿ ರಷ್ಯಾದ ಎಲ್ಲಾ ಬಗೆಯ ವಿಮಾನಗಳನ್ನೂ ನಿಷೇಧಿಸಿವೆ. ಆದರೂ, ಏರ್ ಇಂಡಿಯಾ ವಾರಕ್ಕೆ ಎರಡು ಬಾರಿ ದೆಹಲಿ-ಮಾಸ್ಕೋ ವಿಮಾನ ಸೇವೆಯನ್ನು ಒದಗಿಸುತ್ತಿತ್ತು. ಭಾರತ ತನ್ನ ವಾಯುಪ್ರದೇಶದಲ್ಲಿ ರಷ್ಯಾದ ವಿಮಾನಗಳನ್ನು ನಿಷೇಧಿಸಿಲ್ಲ.

ರಷ್ಯಾದ ಆಗಸದಲ್ಲಿ ಹಾರಾಟ ನಡೆಸುವ ವಿಮಾನಗಳಿಗೆ ವಿಮೆ ಮಾನ್ಯವಾಗಿರುವುದಿಲ್ಲ ಎಂಬ ಕಾರಣಕ್ಕೆ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಏರ್‌ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡುವಂತೆ ಪಿಟಿಐ ಮಾಡಿದ ಮನವಿಗೆ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು