ಬುಧವಾರ, ಮಾರ್ಚ್ 29, 2023
29 °C

ಮುಸ್ಲಿಮರ ಮತಕ್ಕಾಗಿ ಅಖಿಲೇಶ್ ಮತಾಂತರವಾಗಲೂಬಹುದು: ಉತ್ತರ ಪ್ರದೇಶ ಸಚಿವ ಶುಕ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಲಿಯಾ, ಉತ್ತರ ಪ್ರದೇಶ: ಮುಸ್ಲಿಮರ ಮತಗಳನ್ನು ಪಡೆಯುವಾಗ ಸಲುವಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತಾಂತರವಾಗಲೂ ಸಿದ್ಧರಿದ್ದಾರೆ ಎಂದು ಉತ್ತರ ಪ್ರದೇಶ ಸಚಿವ ಆನಂದಸ್ವರೂಪ್‌ ಶುಕ್ಲ ಆರೋಪಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಖಿಲೇಶ್‌ ಯಾದವ್‌ಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಬೆಂಬಲ ಇದೆ. ಐಎಸ್‌ಐನಿಂದ ಆರ್ಥಿಕ ನೆರವನ್ನೂ ಪಡೆಯುತ್ತಿರಬಹುದು’ ಎಂದು ಆರೋಪಿಸಿದರು.

‘ಇಸ್ಲಾಮಿಕ್‌ ಜಗತ್ತಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸವಾಲಾಗಿ ಪರಿಣಮಿಸಿದ್ದಾರೆ. ಹೀಗಾಗಿ ಅಖಿಲೇಶ್‌ ಯಾದವ್ ಮುಸ್ಲಿಮರ ಬೆಂಬಲ ಪಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

ಹರ್ದೋಯಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಖಿಲೇಶ್‌, ಮಹಾತ್ಮಗಾಂಧಿ, ಸರ್ದಾರ ವಲ್ಲಭಭಾಯಿ ಪಟೇಲ್‌, ಜವಾಹರಲಾಲ್‌ ನೆಹರು ಅವರಂತೆ ಮುಹಮ್ಮದ್‌ ಅಲಿ ಜಿನ್ನಾ ಅವರೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು’ ಎಂದು ಹೇಳಿದ್ದರು.

ಅಖಿಲೇಶ್‌ ಯಾದವ್‌ ಅವರ ಈ ಹೇಳಿಕೆಗೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಈಗ ಸಚಿವ ಶುಕ್ಲ ಅವರಿಂದಲೂ ಟೀಕೆ ಕೇಳಿಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು