ಗುರುವಾರ , ಜೂನ್ 24, 2021
25 °C

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ: ಕೋವಿಡ್‌ನಿಂದ 18 ಪ್ರೊಫೆಸರ್‌ಗಳ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ 20 ದಿನಗಳಲ್ಲಿ ಕೋವಿಡ್-19 ಕಾರಣಗಳಿಂದ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಹದಿನೆಂಟು ಪ್ರೊಫೆಸರ್‌ಗಳು ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ಸೇವೆಯಲ್ಲಿದ್ದ ಹಿರಿಯ ಪ್ರೊಫೆಸರ್‌ಗಳು ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಇಡೀ ವಿಶ್ವವಿದ್ಯಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶ್ವವಿದ್ಯಾಲಯದ ಜವಾಹರ್‌ಲಾಲ್‌ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಸುಮಾರು 100 ರೋಗಿಗಳು ದಾಖಲಾಗಿದ್ದಾರೆ.

ಹೆಚ್ಚು ವೇಗವಾಗಿ ಹರಡುತ್ತಿರುವ, ರೂಪಾಂತರಗೊಂಡ ವೈರಸ್‌ ಮಾದರಿ ವ್ಯಾಪಿಸಿರುವ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ಕೈಗೊಳ್ಳುವಂತೆ ವಿಶ್ವವಿದ್ಯಾಲಯದ ಉಪಕುಲಪತಿ ತಾರಿಕ್‌ ಮನ್ಸೂರ್‌ ಅವರು ಐಸಿಎಂಆರ್‌ಗೆ ಪತ್ರ ಬರೆದಿರುವುದಾಗಿ ದಿ ಪ್ರಿಂಟ್‌ ವರದಿ ಮಾಡಿದೆ.

ಋಗ್ವೇದದಲ್ಲಿ ಪಿಎಚ್‌ಡಿ ಪಡೆದಿರುವ ಖಾಲಿದ್‌ ಬಿನ್‌ ಯೂಸುಫ್‌ (60), ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಶಬ್ದಾಬ್‌ ಖಾನ್‌ (58) ಸೇರಿದಂತೆ ಹಲವು ಪ್ರೊಫೆಸರ್‌ಗಳನ್ನು ಅಲಿಗಡ ವಿಶ್ವವಿದ್ಯಾಲಯವು ಕೋವಿಡ್‌ನಿಂದ ಕಳೆದುಕೊಂಡಿದೆ.

ಇದನ್ನೂ ಓದಿ–Karnataka Covid-19 Update: 24 ಗಂಟೆಗಳಲ್ಲಿ ರಾಜ್ಯದಲ್ಲಿ 596 ಮಂದಿ ಸಾವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು