ಗುರುವಾರ , ಆಗಸ್ಟ್ 18, 2022
25 °C

ಅಮರನಾಥ ಯಾತ್ರೆ: 40,233 ಭಕ್ತರ ಭೇಟಿ, ಐವರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ (ಪಿಟಿಐ): ದಕ್ಷಿಣ ಕಾಶ್ಮೀರದ ಪವಿತ್ರ ಗುಹಾಲಯದ ಅಮರನಾಥ ಯಾತ್ರೆ ಈ ವರ್ಷ ಆರಂಭವಾದಾಗಿನಿಂದ ಒಟ್ಟು 40,223 ಭಕ್ತರು ಭೇಟಿ ನೀಡಿದ್ದು, ಐದು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

‘ಚಂದನ್ವಾರಿ-ಶೇಷನಾಗ್ ಮಾರ್ಗದಿಂದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೀರಿಂದರ್ ಗುಪ್ತಾ ಎಂಬ ಯಾತ್ರಿ ಕಾಣೆಯಾಗಿದ್ದಾರೆ. ಹಾಗೂ ದೆಹಲಿಯ ಜೈ ಪ್ರಕಾಶ್, ಬರೇಲಿಯ ದೇವೆಂದರ್ ತಯಾಲ್ (53) ಮತ್ತು ಬಿಹಾರದ ಲಿಪೋ ಶರ್ಮಾ (40) ಎಂಬ ಮೂವರು ಹೃದಯಾಘಾತದಿಂದ ನಿಧನರಾಗಿದ್ದಾರೆ.’

‘ಮಹಾರಾಷ್ಟ್ರದ ಜಗನ್ನಾಥ್ (61) ಅವರು ಪಿಸುಟಾಪ್‌ನಲ್ಲಿ ಕೆಲವು ಆರೋಗ್ಯ ಸ್ಥಿತಿಯಿಂದ ಹಾಗೂ ರಾಜಸ್ಥಾನದ ಅಶು ಸಿಂಗ್ (46) ಎಂಜಿ ಟಾಪ್‌ನಲ್ಲಿ ಕುದುರೆಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ’ ಎಂದು ಅವರು ಹೇಳಿದರು.

ಜೂನ್ 30ರಂದು ಪ್ರಾರಂಭವಾಗಿರುವ ಅಮರನಾಥ ಯಾತ್ರೆಯು ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು