ನಮಸ್ತೆ ಮೇಡಂ: ಡಿಎಸ್‌ಪಿ ಪುತ್ರಿಗೆ, ಸರ್ಕಲ್ ಇನ್ಸ್‌ಪೆಕ್ಟರ್ ತಂದೆಯ ಸೆಲ್ಯೂಟ್

ತಿರುಪತಿ: ಇಲ್ಲಿ ನಡೆದ ಪೊಲೀಸ್ ಮೀಟ್ ಸಭೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಡಿಎಸ್‌ಪಿ ಅಧಿಕಾರಿಯಾಗಿರುವ ತಮ್ಮ ಪುತ್ರಿಗೆ ಸೆಲ್ಯೂಟ್ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿರುಪತಿಯಲ್ಲಿ ಸೋಮವಾರದಿಂದ ‘ಪೊಲೀಸ್ ಡ್ಯೂಟಿ ಮೀಟ್’ ಸಭೆ ನಡಯುತ್ತಿದ್ದು ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡುವ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ಯಾಂ ಅವರು ತಮ್ಮ ಪುತ್ರಿ ಪ್ರಶಾಂತಿಗೆ ಸೆಲ್ಯೂಟ್ ಮಾಡಿದ್ದಾರೆ. ಪ್ರಶಾಂತಿ ಕೂಡ ತಂದೆಗೆ ಮರು ಸೆಲ್ಯೂಟ್ ಮಾಡಿ ಅಭಿಮಾನ ಮೆರೆದಿದ್ದಾರೆ. ತಂದೆ ಮಗಳ ಈ ಹೃದಯಸ್ಪರ್ಶಿಯ ಕ್ಷಣಗಳಿಗೆ ತಿರುಪತಿ ಎಸ್‌ಪಿ ರಮೇಶ್ ರೆಡ್ಡಿ ಸಾಕ್ಷಿಯಾದರು.
#APPolice1stDutyMeet brings a family together!
Circle Inspector Shyam Sundar salutes his own daughter Jessi Prasanti who is a Deputy Superintendent of Police with pride and respect at #IGNITE which is being conducted at #Tirupati.
A rare & heartwarming sight indeed!#DutyMeet pic.twitter.com/5r7EUfnbzB
— Andhra Pradesh Police (@APPOLICE100) January 3, 2021
ಪ್ರಸ್ತುತ ಪ್ರಶಾಂತಿ ಗುಂಟೂರು ಜಿಲ್ಲೆಯ ಡಿಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ಯಾಂ ಅವರು ತಿರುಪತಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಗಳಿಗೆ ತಂದೆ ಸೆಲ್ಯೂಟ್ ಮಾಡುವ ಫೋಟೊವನ್ನು ಆಂಧ್ರಪ್ರದೇಶ ಪೊಲೀಸರು ಟ್ವೀಟ್ ಮಾಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆ, ಮಗಳ ಈ ಭಾವನಾತ್ಮಕ ಘಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.