ಬುಧವಾರ, ಅಕ್ಟೋಬರ್ 21, 2020
22 °C

ಅತ್ಯಾಚಾರ ಸುಳ್ಳು, ಆ ಸಮಯದಲ್ಲಿ ನಾನು ಶ್ರೀಲಂಕಾದಲ್ಲಿದ್ದೆ: ‌ಅನುರಾಗ್‌ ಕಶ್ಯಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ ನಟಿ ಪಾಯಲ್‌ ಘೋಷ್‌‌ ಮಾಡಿರುವ ಅತ್ಯಾಚಾರದ ಆರೋಪ ಸುಳ್ಳು. ಆಕೆ ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಿದ ದಿನ ನಾನು ದೇಶದಲ್ಲೇ ಇರಲಿಲ್ಲ ಎಂದು ಚಿತ್ರ ನಿರ್ಮಾಪಕ ಅನುರಾಗ್‌ ಕಶ್ಯಪ್‌ ಹೇಳಿದ್ದಾರೆ.

2013 ಆಗಸ್ಟ್‌ ತಿಂಗಳಿನಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಅನುರಾಗ್‌ ಕಶ್ಯಪ್‌ ಅವರು ಶ್ರೀಲಂಕಾದಲ್ಲಿದ್ದರು. ಈ ಸಂಬಂಧಿತ ದಾಖಲೆಗಳನ್ನು ವಿಚಾರಣೆ ವೇಳೆ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಕಶ್ಯಪ್ ಅವರ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಕಶ್ಯಪ್‌ ಅವರು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹೇಳಿಕೆಯ ಪುಷ್ಟೀಕರಣಕ್ಕಾಗಿ ಸಂಬಂಧಿತ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ. ಪಾಯಲ್‌ ‌ ಮಾಡಿರುವ ಎಲ್ಲಾ ಆಪಾದನೆಗಳು ಸುಳ್ಳು ಎಂದು ಕಶ್ಯಪ್‌ ಪರ ವಕೀಲರಾದ ಪ್ರಿಯಾಂಕಾ ಕಿಮ್ಮಾನಿ ಹೇಳಿಕೆ ನೀಡಿದ್ದಾರೆ. 

ಮುಂಬೈ ಪೊಲೀಸರು ಗುರುವಾರ ಅನುರಾಗ್‌ ಕಶ್ಯಪ್‌ ಅವರನ್ನು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.

2013 ರ ಆಗಸ್ಟ್‌ನಲ್ಲಿ ನಿರ್ಮಾಪಕ ಅನುರಾಗ್‌ ಕಶ್ಯಪ್‌ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ನಟಿ ಪಾಯಲ್‌‌ ಅವರು ಸೆ.22 ರಂದು ವರ್ಸೋವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು