ಜಮ್ಮು-ಕಾಶ್ಮೀರ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಜಮ್ಮು: ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ನೂರ್‌ಕೋಟೆ ಎಂಬಲ್ಲಿ ಸೋಮವಾರ ಭಯೋತ್ಪಾದಕರ ಅಡಗುತಾಣವನ್ನು ಬೇಧಿಸಿರುವ ಭದ್ರತಾ ಪಡೆಗಳು, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
‘ಗುಪ್ತಚರ ದಳದ ಮಾಹಿತಿ ಮೇರೆಗೆ ಭಾರತೀಯ ಸೇನೆ, ವಿಶೇಷ ಭದ್ರತಾ ಪಡೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಲಾಗಿದೆ’ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದರು.
‘ಎರಡು ಎಕೆ-47 ರೈಫಲ್ ಹಾಗೂ ಮ್ಯಾಗಜೀನ್, 63 ಗುಂಡುಗಳು, ಹ್ಯಾಂಡ್‌ಗ್ರಿಪ್ ಗನ್, ಎಕೆ ಆಕಾರದ ಗನ್‌ನ ಎರಡು ಮ್ಯಾಗಜೀನ್, ಒಂದು ಚೈನೀಸ್ ಪಿಸ್ತೂಲ್, ಚೈನೀಸ್ ಪಿಸ್ತೂಲ್‌ನ ಮ್ಯಾಗಜೀನ್ ಹಾಗೂ 20 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.