ಶುಕ್ರವಾರ, ಅಕ್ಟೋಬರ್ 22, 2021
29 °C

ಪಾಕ್ ಡ್ರೋನ್‌ನಲ್ಲಿ ಇಳಿಸಿರುವ ಶಂಕೆ: ಅಂತರರಾಷ್ಟ್ರೀಯ ಗಡಿ ಬಳಿ ಶಸ್ತ್ರಾಸ್ತ್ರ ವಶ

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಇಳಿಸಲಾಗಿದೆ ಎನ್ನಲಾದ ಶಸ್ತ್ರಾಸ್ತ್ರಗಳನ್ನು ಇಲ್ಲಿಯ ಅಂತರಾಷ್ಟ್ರೀಯ ಗಡಿ ಬಳಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಗಡಿ ಬಳಿ ಇಳಿಸಲಾಗಿದ್ದ ಪ್ಯಾಕೇಟ್‌ನಿಂದ ಎಕೆ ಅಸಲ್ಟ್ ರೈಫಲ್, ಮೂರು ಮ್ಯಾಗಜಿನ್‌ಗಳು, 30 ರೌಂಡ್ಸ್‌ಗಳು ಮತ್ತು ದೂರದರ್ಶಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಶಂಕಿತ ಡ್ರೋನ್‌ನಿಂದ ಹಮ್ಮಿಂಗ್ ಶಬ್ದ ಹೊರಬಂದ ಬಗ್ಗೆ ಗ್ರಾಮಸ್ಥರು ಶನಿವಾರ ತಡರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಂತರರಾಷ್ಟ್ರೀಯ ಗಡಿಯಿಂದ ಸುಮಾರು ಆರು ಕಿಮೀ ದೂರದಲ್ಲಿರುವ ಫಲೈನ್ ಮಂಡಲ್‌ನ ಸೌಂಜನಾ ಗ್ರಾಮದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪೊಲೀಸರು ತಕ್ಷಣವೇ ಗ್ರಾಮವನ್ನು ಸುತ್ತುವರಿದರು ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಆ ವೇಳೆ ತಂತಿಗಳಿಂದ ಕಟ್ಟಿದ್ದ ಹಳದಿ ಪ್ಯಾಕೆಟ್ ಮತ್ತು ಪೇಲೋಡ್ ಅನ್ನು ಸಾಗಿಸಲು ಇದ್ದ ಮರದ ಹಲಗೆ ಪತ್ತೆಯಾಗಿದೆ. ಬಳಿಕ ಅದರಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದ್ದು, ಭಾರತದ ಕಡೆಯಿಂದ ಆ ಶಸ್ತ್ರಾಸ್ತ್ರಗಳನ್ನು ಸ್ವೀಕರಿಸಬೇಕಿದ್ದ ವ್ಯಕ್ತಿಗಳು ಯಾರೆಂದು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ.

ಕಳೆದ ಒಂದು ವರ್ಷದಿಂದ ಪಾಕಿಸ್ತಾನದ ಡ್ರೋನ್ ಚಟುವಟಿಕೆಗಳು ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಇದು ಗಡಿ ಕಾಯುತ್ತಿರುವ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಭದ್ರತಾ ಪಡೆಗಳು ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿವೆ ಮತ್ತು ಕಳೆದ ಒಂದು ವರ್ಷದಲ್ಲಿ ವಿವಿಧ ಸ್ಥಳಗಳಲ್ಲಿ ರೈಫಲ್‌ಗಳು, ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ), ಜಿಗುಟಾದ ಬಾಂಬ್‌ಗಳು ಮತ್ತು ಮಾದಕ ದ್ರವ್ಯಗಳು ಸೇರಿದಂತೆ ದೊಡ್ಡ ಪ್ರಮಾಣದ ಪೇಲೋಡ್‌ಗಳನ್ನು ವಶಪಡಿಸಿಕೊಂಡಿದೆ.

ಈ ವರ್ಷ ಜೂನ್‌ನಲ್ಲಿ ಜಮ್ಮುವಿನ ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣದಲ್ಲಿ ಡ್ರೋನ್ ಮೂಲಕ ಎರಡು ಬಾಂಬ್‌ಗಳನ್ನು ಎಸೆದ ನಂತರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು