ಬುಧವಾರ, ಜನವರಿ 20, 2021
29 °C

ಲಸಿಕೆ ಇಲ್ಲದೆ ಕಚೇರಿಗೆ ಮರಳಲು ಶೇ 83ರಷ್ಟು ಭಾರತೀಯ ಉದ್ಯೋಗಿಗಳಲ್ಲಿ ಭಯ: ಸಮೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಸಿಕೆ ಇಲ್ಲದ ಈ ಹೊತ್ತಲ್ಲಿ ಮತ್ತೆ ಕಚೇರಿಗೆ ಹೋಗುವ ಬಗ್ಗೆ ಭಾರತದ ಶೇಕಡಾ 83 ರಷ್ಟು ಉದ್ಯೋಗಿಗಳಲ್ಲಿ ಆತಂಕವಿದೆ ಎಂದು ಐಟಿ ಕಂಪನಿ 'ಅಟ್ಲಾಸಿಯನ್' ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.

ಸಾಂಸ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ... 'ನಾವು ಕಚೇರಿಗೆ ಮರಳಲು ಸಂಸ್ಥೆಗಳು ಉತ್ತಮವಾಗಿ ಸಿದ್ಧತೆಗಳನ್ನು ಮಾಡಿಕೊಂಡಿವೆ,' ಎಂದು ದೇಶದ ಶೇ. 88 ರಷ್ಟು ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.

'ಮನೆಯಿಂದಲೇ ಕೆಲಸ ಮಾಡುವಂತೆ ಮಾಡಲು ಸಂಸ್ಥೆಗಳು ಈ ಸಾಂಕ್ರಾಮಿಕ ರೋಗವನ್ನು ನೆಪ ಮಾಡಿಕೊಂಡವು,' ಎಂದು ಶೇ 78ರಷ್ಟು ಉದ್ಯೋಗಸ್ಥರು ಇದೇ ಹೊತ್ತಲ್ಲಿ ಕೋಪವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಸರ್ವೆ ಮೂಲಕ ತಿಳಿದು ಬಂದಿದೆ.

'ಶೇ 86ರಷ್ಟು ಉದ್ಯೋಗಿಗಳು ತಮ್ಮ ತಂಡದ ಸದಸ್ಯರು ಈಗ ಪರಸ್ಪರ ಹತ್ತಿರವಾಗಿದ್ದಾರೆಂದು ಭಾವಿಸಿದ್ದಾರೆ. ಶೇಕಡಾ 75 ರಷ್ಟು ಜನರು ತಮ್ಮ ತಂಡವು ಕೋವಿಡ್ -19ಗಿಂತಲೂ ಮೊದಲಿನ ಪರಿಸ್ಥಿಗೆ ಹೋಲಿಸಿದರೆ, ಈ ಸಂದರ್ಭದಲ್ಲಿ ಒಟ್ಟಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಭಾವಿಸಿದ್ದಾರೆ,' ಎಂದು ಅಕ್ಟೋಬರ್‌ನಲ್ಲಿ ನಡೆದ ಸಮೀಕ್ಷೆಯು ಬಹಿರಂಗಪಡಿಸಿದೆ.

'ಮುಂದೆ ಸೃಷ್ಟಿಯಾಗಲಿರುವ 'ಸಹಜ ಸಾಮಾನ್ಯ ಪರಿಸ್ಥಿತಿ'ಯು ಭವಿಷ್ಯದಲ್ಲಿ ಕೆಲಸ, ಸಂಬಂಧ, ಸಹಯೋಗವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಈ ಸಮೀಕ್ಷೆ ಬೊಟ್ಟು ಮಾಡಿ ತೋರಿಸುತ್ತಿದೆ. ಸಂಕೀರ್ಣತೆಗಳನ್ನು ಎದುರಿಸುತ್ತಿರುವ ಜನರ ನಿಜವಾದ ಧ್ವನಿಗಳಿವು,' ಎಂದು ಐಟಿ ಸಂಸ್ಥೆ ಅಟ್ಲಾಸಿಯನ್‌ನ ಎಂಜಿನಿಯರಿಂಗ್‌ (ಬೆಂಗಳೂರು) ವಿಭಾಗದ ಮುಖ್ಯಸ್ಥ ದಿನೇಶ್‌ ಅಜ್ಮೆರಾ ಹೇಳಿದ್ದಾರೆ.

'ಜನರು ತಮ್ಮ ತಂಡದೊಂದಿಗೆ ಹೆಚ್ಚು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೆಚ್ಚಿನ ಭಾರತೀಯ ಉದ್ಯೋಗಿಗಳು (ಶೇ.89) ತಮ್ಮ ತಂಡದಲ್ಲಿ ಏಕತೆ ಮತ್ತು ಒಗ್ಗಟ್ಟಿನ ಭಾವನೆ ಇರುವುದಾಗಿ ಹೇಳಿಕೊಂಡಿದ್ದಾರೆ. 2ರಲ್ಲಿ ಒಬ್ಬರು (ಶೇ. 50 ) ವ್ಯವಸ್ಥಾಪಕರು ತಮ್ಮ ಕೆಲಸ ಕೋವಿಡ್‌ನ ಮೊದಲಿನ ಪರಿಸ್ಥಿತಿಗಿಂತ ಈಗ ಹೆಚ್ಚು ಸುರಕ್ಷಿತವಾಗಿದೆ,' ಎಂದು ಭಾವಿಸಿದ್ದಾರೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು