ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶ: ಲಸಿಕೆ ಪಡೆದರೆ ಉಚಿತ ಅಕ್ಕಿ

Last Updated 9 ಜೂನ್ 2021, 14:23 IST
ಅಕ್ಷರ ಗಾತ್ರ

ಇಟಾನಗರ: ಕೋವಿಡ್‌–19 ಲಸಿಕೆ ಪಡೆದರೆ ಉಚಿತವಾಗಿ 20 ಕೆ.ಜಿ. ಅಕ್ಕಿಯನ್ನು ನೀಡುವ ಮೂಲಕ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವ ತಂತ್ರವನ್ನು ಇಲ್ಲಿಯ ಸ್ಥಳೀಯಾಡಳಿತ ಅನುಸರಿಸುತ್ತಿದೆ.

ಗ್ರಾಮಸ್ಥರಲ್ಲಿ ಲಸಿಕೆಯ ಕುರಿತು ಇರುವ ತಪ್ಪು ಪರಿಕಲ್ಪನೆಗಳನ್ನು ಹೋಗಲಾಡಿಸುವ ಸಂಬಂಧ ಕಾರ್ಯರೂಪಕ್ಕೆ ತಂದ ಈ ಕಾರ್ಯತಂತ್ರ ಫಲಪ್ರದವಾಗಿದೆ.

‘ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ನಿರಂತರವಾಗಿ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಮಧ್ಯಾಹ್ನದೊಳಗೆ 80ಕ್ಕೂ ಹೆಚ್ಚು ಮಂದಿ ಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ. ಜೂನ್‌ 20ರೊಳಗೆ ಶೇ100 ರಷ್ಟು ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ’ ಎಂದು ಈ ಕಾರ್ಯತಂತ್ರದ ರೂವಾರಿ ಯಜ್ಯಲಿಯ ಸರ್ಕಲ್ ಆಫೀಸರ್‌ ತಾಶಿ ವಾಂಗ್‌ಚುಕ್‌ ಥೋಂಗ್‌ಡೊಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT