ಕೆಸಿಆರ್, ಕೇಜ್ರಿವಾಲ್ ಭೇಟಿ: ಪರ್ಯಾಯ ರಾಷ್ಟ್ರ ರಾಜಕಾರಣದ ಕುರಿತು ಚರ್ಚೆ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರ ನಡುವಿನ ಚರ್ಚೆಯು ಸುಮಾರು ಒಂದು ಗಂಟೆ ಕಾಲ ನಡೆದಿದೆ.
ದೇಶದ ಒಕ್ಕೂಟ ವ್ಯವಸ್ಥೆ, ರಾಷ್ಟ್ರ ಬೆಳವಣಿಗೆಯಲ್ಲಿ ರಾಜ್ಯಗಳ ಕೊಡುಗೆ ಹಾಗೂ ರಾಷ್ಟ್ರ ರಾಜಕಾರಣದ ಕುರಿತು ಉಭಯ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ ಎಂದು ಸಿಎಂ (ಕೆಸಿಆರ್) ಕಚೇರಿ ತಿಳಿಸಿದೆ.
ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ರಾಜಕೀಯ ಕಾರ್ಯಸೂಚಿಯನ್ನು ರೂಪಿಸುವ ಕುರಿತು ಕೆಸಿಆರ್ ಅವರು ಕೇಜ್ರಿವಾಲ್‌ರೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳೂ ಮುನ್ನೆಲೆಗೆ ಬಂದಿವೆ.
ಮಾತುಕತೆಯ ಬಳಿಕ ಉಭಯ ನಾಯಕರು ಚಂಡೀಗಢಕ್ಕೆ ತೆರಳಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ನಡೆದ ಹೋರಾಟದಲ್ಲಿ ಮೃತಪಟ್ಟ ರೈತರ ನಿವಾಸಗಳಿಗೆ ಅವರು ಭೇಟಿ ನೀಡಿಲಿದ್ದಾರೆ. ಇದೇ ವೇಳೆ, ಸಂತ್ರಸ್ತ ಕುಟುಂಬಗಳಿಗೆ ₹3 ಲಕ್ಷ ಚೆಕ್ ಅನ್ನು ಕೆಸಿಆರ್ ವಿತರಿಸಲಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನೂ ಕೆಸಿಆರ್ ಶನಿವಾರ ಭೇಟಿ ಮಾಡಿರುವುದು ರಾಷ್ಟ್ರ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.