ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜ್‌ ಮಹಲ್ ವೀಕ್ಷಣೆ ಅವಕಾಶದೊಂದಿಗೆ ನಿಟ್ಟುಸಿರು ಬಿಟ್ಟ 465 ಛಾಯಾಗ್ರಾಹಕರು

Last Updated 21 ಸೆಪ್ಟೆಂಬರ್ 2020, 11:44 IST
ಅಕ್ಷರ ಗಾತ್ರ

ಆಗ್ರಾ: ‘ಆರು ತಿಂಗಳ ಬಳಿಕ ಕೆಲ ನಿರ್ಬಂಧಗಳೊಂದಿಗೆ ಪ್ರವಾಸಿಗರಿಗೆ ತಾಜ್‌ಮಹಲ್ ವೀಕ್ಷಿಸಲು ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪರವಾನಗಿ ಪಡೆದ 450 ಕ್ಕೂ ಹೆಚ್ಚು ಛಾಯಾಗ್ರಾಹಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.

ತಾಜ್ ಮಹಲ್‌ನ್ನು ವೀಕ್ಷಿಸಲು ಬರುವ ಪ್ರವಾಸಿಗರನ್ನೇ ಅವಲಂಬಿಸಿರುವ ಒಟ್ಟು 465 ಛಾಯಾಗ್ರಾಹಕರು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ ಮತ್ತು ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಂದರಲ್ಲಿಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮತ್ತು ಇನ್ನೊಂದು ಮಧ್ಯಾಹ್ನ 12.30 ರಿಂದ ಸೂರ್ಯಾಸ್ತದವರೆಗೆ ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ದಿನವೊಂದಕ್ಕೆ 5,000 ಪ್ರವಾಸಿಗರು ಭೇಟಿ ನೀಡಲು ಸರ್ಕಾರವು ಅನುಮತಿ ನೀಡಿದೆ. ಪ್ರತಿ ಪಾಳಿಯಲ್ಲಿ 2,500 ಪ್ರವಾಸಿಗರಿಗೆ ಪ್ರವೇಶಿಸಲು ಅವಕಾಶವಿದ್ದರೆ, ಆಗ್ರಾದ ಇತರ ಪಾರಂಪರಿಕ ತಾಣಗಳಲ್ಲಿ 1,000 ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ.

ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ, ಸೋಮವಾರದ ಮೊದಲ ಪಾಳಿಯಲ್ಲಿ 500ಕ್ಕೂ ಹೆಚ್ಚು ಪ್ರವಾಸಿಗರು ತಾಜ್‌ಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.

ಏಕಾಏಕಿ ಹರಡಿದ ವೈರಸ್‌ನಿಂದಾಗಿ ಹಲವು ಛಾಯಾಗ್ರಾಹಕರು ತೀವ್ರ ಹೊಡೆತಕ್ಕೆ ಸಿಲುಕಿದರು. ಅವರಲ್ಲಿ ಕೆಲವರು ಬೇರೆ ವ್ಯವಹಾರಗಳನ್ನು ಮಾಡಲು ಯತ್ನಿಸಿದರೂ ಕೂಡ, ನಮ್ಮಲ್ಲಿ ಹೆಚ್ಚಿನವರು ಛಾಯಾಗ್ರಹಣವನ್ನು ಹೊರತುಪಡಿಸಿ ಬೇರೇನು ತಿಳಿದಿಲ್ಲ ಎಂದು ಸಂಕಷ್ಟಕ್ಕೆ ಸಿಲುಕಿಕೊಂಡರು. ನಮ್ಮ ಉಳಿತಾಯವು ಕರಗಲು ಪ್ರಾರಂಭಿಸಿತ್ತು ಮತ್ತು ನಮ್ಮಲ್ಲಿ ಹೆಚ್ಚಿನವರು ಈಗ ಸಾಲಕ್ಕೆ ಗುರಿಯಾಗಿದ್ದಾರೆ. ನಮ್ಮ ಮಕ್ಕಳು ಮತ್ತು ಕುಟುಂಬಗಳನ್ನು ನಾವು ನೋಡಿಕೊಳ್ಳಲೇಬೇಕಾಗಿತ್ತು. ನಮಗೆ ಬೇರೆ ಯಾವ ಆಯ್ಕೆಗಳಿವೆ? ಎನ್ನುತ್ತಾರೆ ಪುರಾತತ್ವ ಪ್ರದೇಶಗಳ ಛಾಯಾಗ್ರಹಣ ಅಸೋಸಿಯೇಶನ್‌ನ ಅಧ್ಯಕ್ಷ ಸರ್ವೋತ್ತಮ್ ಸಿಂಗ್.

ಸ್ಮಾರ್ಟ್‌ಫೋನ್‌ಗಳು ಎಲ್ಲರಿಗೂ ಲಭ್ಯವಾದಾಗಿನಿಂದಲೂ ಛಾಯಾಗ್ರಾಹಕರ ವ್ಯವಹಾರ ಕುಸಿತ ಕಾಣುತ್ತಲೇ ಇದೆ. ಆದರೆ ಕೋವಿಡ್-19 ಬಿಕ್ಕಟ್ಟು ಅವರ ವೃತ್ತಿಗೆ ಮತ್ತಷ್ಟು ಹೊಡೆತವನ್ನು ನೀಡಿತು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ರೆಸ್ಟೋರೆಂಟ್‌ಗಳು, ಇ-ರಿಕ್ಷಾ ಚಾಲಕರು, ಕಾರ್ಮಿಕರು ಮುಂತಾದ ಇತರ ವೃತ್ತಿಗಳಲ್ಲಿ ತೊಡಗಿರುವವರಲ್ಲಿಯೂ ಕೂಡ ಪರಿಸ್ಥಿತಿ ಉತ್ತಮವಾಗಿಲ್ಲ.

ದೇಶದಾದ್ಯಂತ ಸಾಂಕ್ರಾಮಿಕ ರೋಗ ಕೋವಿಡ್-19 ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಕೇಂದ್ರ ಸಂಸ್ಕೃತಿ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ ಮಾರ್ಚ್ 17 ರಂದು ತಾಜ್ ಅನ್ನು ಮುಚ್ಚಲಾಯಿತು. ಕೋವಿಡ್ ಮಾರ್ಗಸೂಚಿಯಲ್ಲಿ ದಿನದಲ್ಲಿ ಕೇವಲ ಐದು ಸಾವಿರ ಪ್ರವಾಸಿಗರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಗುಂಪು ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿಲ್ಲ.

ಪ್ರವಾಸಿಗರು ಸ್ಮಾರಕದ ಹಳಿ ಮತ್ತು ಗೋಡೆಗಳನ್ನು ಮುಟ್ಟದಂತೆ ಕಾವಲುಗಾರರು ಕಟ್ಟುನಿಟ್ಟಾಗಿ ನಿಗಾ ವಹಿಸುತ್ತಾರೆ ಮತ್ತು ಬಳಸಿದ ಟಿಶ್ಯು ಪೇಪರ್, ಮಾಸ್ಕ್‌ಗಳು, ಕೈಗವಸುಗಳು ಮತ್ತು ಶೂ ಕವರ್‌ಗಳನ್ನು ಕಸದ ಬುಟ್ಟಿಯಲ್ಲಿ ಎಸೆಯಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ.

ಪುರಾತತ್ವ ಇಲಾಖೆಯಡಿ ಬರುವ ದೇಶದ 3691 ಪಾರಂಪರಿಕ ತಾಣಗಳ ಪೈಕಿ ಹಲವು ಈಗಾಗಲೇ ಜುಲೈ 6ರಿಂದಲೇ ಪ್ರವೇಶಕ್ಕೆ ಮುಕ್ತವಾಗಿದ್ದು, ಆಗ್ರಾ ಫೋರ್ಟ್ ಮತ್ತು ತಾಜ್‌ ಮಹಲ್ ಕಂಟೈನ್‌ಮೆಂಟ್ ವಲಯದ ಅಡಿಯಲ್ಲಿದ್ದದ್ದರಿಂದ ಇದುವರೆಗೂ ಮುಚ್ಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT