ಗುರುವಾರ , ಆಗಸ್ಟ್ 18, 2022
27 °C

ದೋಣಿ ಮಗುಚಿ ನಾಲ್ವರು ನಾಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದಿಬ್ರುಗಢ, ಅಸ್ಸಾಂ: ಚಬುವಾ ಬಳಿಯ ರಹ್ಮರಿಯಾ ಪ್ರೇದೇಶದ ಬ್ರಹ್ಮಪುತ್ರ ನದಿಯಲ್ಲಿ ಭಾನುವಾರ ದೋಣಿ ಮಗುಚಿ ಬಿದ್ದಿದ್ದು, ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಶಂಕರ್ ಯಾದವ್, ಸಂಗ್‌ಕುರ್ ಕುರ್ಮಿ, ಧಮನ್ ದಾಸ್ ಮತ್ತು ಕಿಶನ್ ಯಾದವ್ ನಾಪತ್ತೆಯಾದವರು. ಒಟ್ಟು 9 ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ದೋಣಿ ಮಗುಚಿದಾಗ ಐದು ಮಂದಿ ಮಾತ್ರ ಈಜಿ ದಡ ಸೇರಿದ್ದಾರೆ. ನಾಪತ್ತೆಯಾದವರ ಪತ್ತೆಗೆ ಎನ್‌ಡಿಆರ್‌ಎಫ್‌ನ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಸಹಾಯ ಕೋರಲಾಗಿದೆ’ ಎಂದು ಎಎಸ್‌ಪಿ ಬಿತುಲ್‌ ಚೇತಿಯಾ ಹೇಳಿದರು.

ಇನ್ನು ಸ್ಥಳಕ್ಕೆ ಡೆಪ್ಯುಟಿ ಕಮಿಷನ‌ರ್‌ ಬಿಸ್ವಜ್ತ್‌ ಪೆಗು, ಜಿಲ್ಲಾ ವಿ‍ಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು