ಸೋಮವಾರ, ಅಕ್ಟೋಬರ್ 18, 2021
22 °C
ವನ್ಯಮೃಗದ ಬೇಟೆ, ಕಳ್ಳಸಾಗಣೆಗೆ ಕಡಿವಾಣ ಉದ್ದೇಶ

ಘೇಂಡಾಮೃಗ ಕೊಂಬುಗಳ ದಹನಕ್ಕೆ ಅಸ್ಸಾಂ ಸರ್ಕಾರ ನಿರ್ಧಾರ; ಕಾರಣ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ರಾಜ್ಯದ ಸಂಗ್ರಹಾಗಾರಗಳಲ್ಲಿರುವ, ಘೇಂಡಾಮೃಗಗಳ 2,479 ಕೊಂಬುಗಳನ್ನು ಸುಡಬೇಕು ಎಂಬ ಪ್ರಸ್ತಾವನೆಗೆ ಅಸ್ಸಾಂ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಅನುಮೋದನೆ ನೀಡಿತು.

ಘೇಂಡಾಮೃಗದ ಕೊಂಬಿನಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಕೊಂಬುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಹ ಭಾರಿ ಬೇಡಿಕೆ. ಈ ಕಾರಣಕ್ಕೆ ಈ ಪ್ರಾಣಿಗಳ ಕಳ್ಳಬೇಟೆ ಅಸ್ಸಾಂನಲ್ಲಿ ಅಧಿಕ.

‘ಘೇಂಡಾಮೃಗಗಳ ಹತ್ಯೆ ಮತ್ತು ಕೊಂಬುಗಳ ಕಳ್ಳಸಾಗಣೆಗೆ ಕಡಿವಾಣ ಹಾಕುವ ಸಲುವಾಗಿ ಸರ್ಕಾರದ ಸಂಗ್ರಹದಲ್ಲಿರುವ ಕೊಂಬುಗಳನ್ನು ಸುಡಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಒಟ್ಟು 2,623 ಕೊಂಬುಗಳ ದಾಸ್ತಾನಿದೆ. ಈ ಕೊಂಬುಗಳ ಬಳಕೆ ಬಗ್ಗೆ ಜನರಲ್ಲಿ ಮನೆ ಮಾಡಿರುವ ಮೌಢ್ಯವನ್ನು ಹೋಗಲಾಡಿಸುವ ಉದ್ದೇಶದಿಂದ 2,479 ಕೊಂಬುಗಳನ್ನು ಸಾರ್ವಜನಿಕವಾಗಿಯೇ ಸುಡಲಾಗುವುದು. ಉಳಿದ 94 ಕೊಂಬುಗಳನ್ನು ಅಧ್ಯಯನ ಹಾಗೂ ಪಾರಂಪರಿಕ ದೃಷ್ಟಿಯಿಂದ ಸಂರಕ್ಷಿಸಿಡಲಾಗುವುದು. ಇನ್ನುಳಿದ 50 ಕೊಂಬುಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗಾಗಿ ಉಳಿಸಿಕೊಳ್ಳಲಾಗುವುದು’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು