ಮುಜಾಫ್ಫರ್‌ನಗರ: ಕೊಲೆ ಯತ್ನಕ್ಕೆ ಸಂಬಂಧಿಸಿದ ಮೊಕದ್ದಮೆಯೊಂದರಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್‌ರನ್ನು ಸಂಸದರು/ಶಾಸಕರ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ನಹೀದ್ ಮತ್ತು ಹೈದರ್ ಆಲಿ ವಿರುದ್ಧದ ಆರೋಪ ಸಾಬೀತುಪಡಿಸಲು ಸರ್ಕಾರದ ಪರ ವಕೀಲರು ವಿಫಲವಾದ ಆಧಾರದ ಮೇಲೆ ವಿಶೇಷ ನ್ಯಾಯಾಧೀಶ ಸುರೇಂದರ್ ಕುಮಾರ್ ಈ ಆದೇಶ ಹೊರಡಿಸಿದರು ಎಂದು ನಹೀದ್ ಪರ ವಕೀಲ ರಶೀದ್ ಆಲಿ ಚೌಹಾನ್ ಶನಿವಾರ ತಿಳಿಸಿದ್ದಾರೆ.

ನಹೀದ್ ವಿರುದ್ಧ ಕೊಲೆಗೆ ಯತ್ನ ಮೊಕದ್ದಮೆಯನ್ನು ಉತ್ತರ ಪ್ರದೇಶ ವಿದ್ಯುತ್ ನಿಗಮದ ಉಪವಿಭಾಗೀಯ ಅಧಿಕಾರಿ ನಝೀಮ್ ಆಲಿ ಅವರು 2019ರ ಜುಲೈನಲ್ಲಿ ದಾಖಲಿಸಿದ್ದರು. ಶಾಮ್ಲಿ ಜಿಲ್ಲೆಯ ಜಿಂಝಾನ ಪ್ರದೇಶದಲ್ಲಿ ನಝೀಮ್ ಅವರು ತೆರಳುತ್ತಿದ್ದ ವಾಹನವನ್ನು ಅಡ್ಡಗಟ್ಟಿದ್ದ ನಹೀದ್ ವಾಹನದಲ್ಲಿದ್ದ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿದ್ದರು ಮತ್ತು ಅಧಿಕೃತ ಕೆಲಸಕ್ಕೆ ಅಡ್ಡಿಪಡಿಸಿದ್ದರು ಎಂದು ದೂರಿನಲ್ಲಿ ಹೇಳಿದ್ದರು.

ನಹೀಮ್ ವಿರುದ್ಧ ಕೊಲೆಗೆ ಯತ್ನ ಸೇರಿ ಭಾರತೀಯ ದಂಡ ಸಂಹಿತೆ ಅಡಿ ಹಲವಾರು ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.