ಶುಕ್ರವಾರ, ಮಾರ್ಚ್ 31, 2023
22 °C

ಹಿಮಕುಸಿತ: ಭಾರತ–ಟಿಬೆಟ್‌ ರಸ್ತೆ ಬಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಗುರುವಾರ ಹಿಮಕುಸಿತ ಸಂಭವಿಸಿದ್ದು, ಭಾರತ (ಹಿಂದೂಸ್ತಾನ್)-ಟಿಬೆಟ್ ರಸ್ತೆಯನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂಹ್ ಬಳಿಯ ಟಿಂಕು ನಲ್ಹಾ ಬಳಿ ಹಿಮಕುಸಿತ ಸಂಭವಿಸಿದ್ದು, ರಸ್ತೆ  (ರಾಷ್ಟ್ರೀಯ ಹೆದ್ದಾರಿ 5) ತೆರವು ಕಾರ್ಯ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, 4 ರಾಷ್ಟ್ರೀಯ ಹೆದ್ದಾರಿ ಸೇರಿ, ರಾಜ್ಯದ ಇತರ ಭಾಗಗಳಲ್ಲಿ ಹಿಮಪಾತದಿಂದ 256 ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಅದರ ಜೊತೆಗೆ 1,024 ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ.

ಹಿಮಾಚಲ ಪ್ರದೇಶದ ಅನೇಕ ಎತ್ತರ ಪ್ರದೇಶಗಳಲ್ಲಿ ಜ.29,30ರಂದು  ತೀವ್ರ ಮಳೆ ಮತ್ತು ಹಿಮ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.  

ಮಳೆಯಿಂದ ಸಸ್ಯಗಳು ಕೊಳೆಯಲು ಅಥವಾ ಗೋಧಿ ಮತ್ತು ತರಕಾರಿಗಳಲ್ಲಿ ಮೊಳಕೆಯೊಡೆಯಲು ಕಾರಣವಾಗಬಹುದು, ನೀರು ನಿಲ್ಲದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು