ಶುಕ್ರವಾರ, ಮೇ 20, 2022
26 °C

ಬೆಂಗಳೂರು ಮೂಲದ ಡೋಲೋ 650 ದಾಖಲೆ ಮಾರಾಟ: 2 ವರ್ಷದಲ್ಲಿ ₹560 ಕೋಟಿ ಗಳಿಕೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

One of the reasons its sales are hitting the roof is that Dolo 650 has become the doctor’s favourite to prescribe. Credit: iStock Images

ಬೆಂಗಳೂರು: ರಾಜ್ಯದ ಮೈಕ್ರೋ ಲ್ಯಾಬ್ಸ್ ಲಿ. ಸಂಸ್ಥೆ ಪರಿಚಯಿಸಿರುವ ‘ಡೋಲೋ 650‘ ಮಾತ್ರೆ 2020ರ ಜನವರಿಯಿಂದ ಈವರೆಗೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ₹560 ಕೋಟಿಗೂ ಅಧಿಕ ಆದಾಯ ಗಳಿಸಿದೆ.

ಪ್ಯಾರಾಸಿಟಮೊಲ್ ವಿಭಾಗದಲ್ಲಿ ಸುಮಾರು 40 ವಿವಿಧ ಕಂಪನಿಗಳ ಮಾತ್ರೆಗಳು ಲಭ್ಯವಿದ್ದರೂ, ಅವುಗಳೆಲ್ಲವನ್ನೂ ಹಿಂದಿಕ್ಕಿ ‘ಡೋಲೋ 650‘ ಮಾತ್ರ ಗರಿಷ್ಠ ಮಾರಾಟ ದಾಖಲೆ ಸ್ಥಾಪಿಸಿದೆ.

ಡಿಸೆಂಬರ್ 2021ರಲ್ಲಿ ₹28.9 ಕೋಟಿ ಮೌಲ್ಯದ ಡೋಲೋ 650 ಮಾತ್ರೆ ಮಾರಾಟವಾಗಿದೆ. ಇದು 2020ರ ಡಿಸೆಂಬರ್‌ಗೆ ಹೋಲಿಸಿದರೆ ಶೇ 60ಕ್ಕೂ ಹೆಚ್ಚು ಎನ್ನುವುದು ಗಮನಾರ್ಹ.

ಜತೆಗೆ ಕೋವಿಡ್ ಸೋಂಕು ಎರಡನೇ ಅಲೆ ಗರಿಷ್ಠ ಪ್ರಮಾಣದಲ್ಲಿದ್ದ 2021ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೂಡ ಗರಿಷ್ಠ ಮಾರಾಟ ಕಂಡಿದೆ.

ವಿವಿಧ ರೋಗ ಲಕ್ಷಣಗಳಿಗೆ ವೈದ್ಯರು ಹೆಚ್ಚಾಗಿ ಡೋಲೋ 650 ಅನ್ನೇ ಶಿಫಾರಸು ಮಾಡುತ್ತಾರೆ. ಎಲ್ಲ ವಯೋಮಾನದವರು ಮತ್ತು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರು ಕೂಡ ಡೋಲೋ ಪಡೆದುಕೊಳ್ಳಬಹುದು ಎಂದು ‘ದಿ ಪ್ರಿಂಟ್‌‘ಗೆ ಫೋರ್ಟಿಸ್ ಆಸ್ಪತ್ರೆಯ ಡಾ. ರಿತೇಶ್ ಗುಪ್ತಾ ಹೇಳಿದ್ದಾರೆ.

ಡೋಲೋ 650ಯ ಜನಪ್ರಿಯತೆ ಸಾಮಾಜಿಕ ತಾಣಗಳಲ್ಲೂ ವೈರಲ್ ಆಗಿದ್ದು, ವಿವಿಧ ಮೀಮ್ಸ್ ಕೂಡ ಸೃಷ್ಟಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು