ಬುಧವಾರ, ಮಾರ್ಚ್ 29, 2023
32 °C

ಕೋವ್ಯಾಕ್ಸಿನ್‌ ಬಳಕೆಯ ಅವಧಿ 12 ತಿಂಗಳಿಗೆ ವಿಸ್ತರಣೆ: ಭಾರತ್ ಬಯೋಟೆಕ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವ್ಯಾಕ್ಸಿನ್‌ ಬಳಕೆಯ ಅವಧಿಯನ್ನು 12 ತಿಂಗಳುಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ಕೋವಿಡ್ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಬುಧವಾರ ತಿಳಿಸಿದೆ.

ಬಳಕೆಯ ಅವಧಿ ವಿಸ್ತರಣೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಅನುಮೋದನೆ ನೀಡಿದೆ ಎಂದು ಕಂಪನಿ ಹೇಳಿದೆ.

ಕೋವ್ಯಾಕ್ಸಿನ್‌ ಉತ್ಪಾದನೆಯಾದ ದಿನಾಂಕದಿಂದ ಅದರ ‘ಶೆಲ್ಫ್ ಲೈಫ್ (ಬಳಕೆಯ ಅವಧಿ)’ ಅನ್ನು 12 ತಿಂಗಳುಗಳಿಗೆ ವಿಸ್ತರಿಸಲಾಗಿದೆ. ಹೆಚ್ಚುವರಿ ಸ್ಥಿರ ದತ್ತಾಂಶಗಳ ಆಧಾರದಲ್ಲಿ ಬಳಕೆಯ ಅವಧಿ ವಿಸ್ತರಣೆಗೆ ಸಿಡಿಎಸ್‌ಸಿಒ ಅನುಮೋದನೆ ನೀಡಿದೆ. ಈ ಮಾಹಿತಿಯನ್ನು ನಮ್ಮ ಎಲ್ಲ ಪಾಲುದಾರರಿಗೂ ತಿಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು