ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿ ಬೈಕ್ ಸವಾರಿ

ಭೋಪಾಲ: ಭಾರತ್ ಜೋಡೊ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೈಕ್ ಸವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಧ್ಯಪ್ರದೇಶದಲ್ಲಿ ಭಾನುವಾರ ಪಾದಯಾತ್ರೆ ವೇಳೆಯಲ್ಲಿ ಇಬ್ಬರು ಬೈಕ್ ಸವಾರರನ್ನು ರಾಹುಲ್ ಭೇಟಿಯಾದರು.
ಇದನ್ನೂ ಓದಿ: ಮಹಿಳೆಯರ ಕುರಿತು ವಿವಾದಿತ ಹೇಳಿಕೆ: ಬಾಬಾ ರಾಮದೇವ್ಗೆ ನೋಟಿಸ್
ಈ ಸಂಬಂಧ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದೆ. ಹೆಲ್ಮೆಟ್ ಧರಿಸಿಯೇ ರಾಹುಲ್ ಗಾಂಧಿ ಬೈಕ್ ಸವಾರಿ ಮಾಡಿದರು.
जब हम चलते हैं तो रास्ते खुद बन जाते हैं...#BharatJodoYatra pic.twitter.com/LL3RRX10Ez
— Congress (@INCIndia) November 27, 2022
ಬೈಕ್ ಸವಾರರಾದ ರಜತ್ ಪಾರಾಶರ್ ಮತ್ತು ಸಾರ್ಥಕ್, ಯಾತ್ರೆ ಸಂದರ್ಭದಲ್ಲಿ ರಾಹುಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರ ಜೊತೆಗೆ ತಂದಿದ್ದ ಜರ್ಮನ್ ಶೆಫರ್ಡ್ ಶ್ವಾನದೊಂದಿಗೆ ರಾಹುಲ್ ಕಾಣಿಸಿಕೊಂಡರು.
ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ರಜತ್, ರಾಹುಲ್ ಗಾಂಧಿ ಕೂಡ ಪ್ರಾಣಿ ಪ್ರೇಮಿಯಾಗಿದ್ದು, ಅದ್ಭುತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ರಸ್ತೆಯಲ್ಲಿ ನಡೆಯುತ್ತಿರುವ ಪ್ರಾಣಿಗಳ ಸಾವಿನ ಬಗ್ಗೆ ಚರ್ಚಿಸಲು ಬಯಸಿದ್ದೆ ಎಂದು ಹೇಳಿದರು.
Anything is paw-sible with a dog by your side! 🐾
Wearing bike goggles, riding pillion with her pet-parent Rajat Parashar on his motor bike, Marvel came all the way from Gwalior to meet @RahulGandhi and join the #BharatJodoYatra. pic.twitter.com/oceWcja4nP
— Congress (@INCIndia) November 27, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.