ಬೆಂಗಳೂರು: ಕೊವ್ಯಾಕ್ಸಿನ್ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿ ಭಾಗವಹಿಸಿದ್ದ ಭೋಪಾಲ್‌ನ ಸ್ವಯಂಸೇವಕ 9 ದಿನಗಳ ಬಳಿಕ ಮೃತಪಟ್ಟಿದ್ದು, ಆತನ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದು ಬಂದಿದೆ ಎಂದು ಭಾರತ್ ಬಯೋಟೆಕ್ ಇಂಟರ್ ನ್ಯಾಶನಲ್ ಲಿಮಿಟೇಡ್ ತಿಳಿಸಿದೆ.

ಡಿಸೆಂಬರ್ 12ರಂದು ಭೋಪಾಲ್‌ನ ಪೀಪಲ್ಸ್ ಕಾಲೇಜು ಮತ್ತು ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದ ಸ್ವಯಂ ಸೇವಕ, 42 ವರ್ಷದ ದಿನಗೂಲಿ ನೌಕರ ದೀಪಕ್ ಮರಾವಿ, ಡಿಸೆಂಬರ್ 21ರಂದು ಮೃತಪಟ್ಟಿದ್ದರು.ಈ ಬಗ್ಗೆ ಅವರ ಮಗ ಮೆಡಿಕಲ್ ಸೆಂಟರ್‌ಗೆ ಮಾಹಿತಿ ನೀಡಿದ್ದು, ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.

"ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜು ನೀಡಿರುವ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಶಂಕಿತ ವಿಷದ ಪರಿಣಾಮವಾಗಿ ಹೃದಯ ಉಸಿರಾಟದ ವೈಫಲ್ಯವೇ ಸಾವಿಗೆ ಕಾರಣವಾಗಿದೆ" ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.

“ಸ್ವಯಂ ಸೇವಕನು ಅಧ್ಯಯನದಲ್ಲಿ ಒಳಗೊಂಡಿರುವ ಅಧ್ಯಯನ ಲಸಿಕೆ ಅಥವಾ ಪ್ಲಸೀಬೊ ಪಡೆದಿದ್ದಾರೆ ಎಂಬುದನ್ನು ನಾವು ಖಚಿತಪಡಿಸಲು ಸಾಧ್ಯವಿಲ್ಲ," ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಕಂಪನಿಯು ಈ ಹಿಂದೆ ಹೇಳಿದಂತೆ, “ರ್ಯಾಂಡಮ್,ಡಬಲ್-ಬ್ಲೈಂಡ್, ಪ್ಲಸೀಬೊ-ನಿಯಂತ್ರಿತ.” ವಾಗಿರುತ್ತವೆ.

ಡಬಲ್ ಬ್ಲೈಂಡ್ ಪ್ರಾಯೋಗಿಕ ಪ್ರಕ್ರಿಯೆಯನ್ನು ಸೂಚಿಸುತ್ತದೆ, ಅಲ್ಲಿ ಡೋಸ್ ಕಂಟೆಂಟ್ (ಪರೀಕ್ಷಾ ಲಸಿಕೆ ಅಥವಾ ಪ್ಲಸೀಬೊ) ವಿಷಯ ಸ್ವಯಂಸೇವಕನಿಗಾಗಲಿ ಅಥವಾ ನಿರ್ವಾಹಕರಿಗಾಗಲಿ ತಿಳಿಯುವುದಿಲ್ಲ.

ಮೂರನೇ ಹಂತದ ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡ 25,800 ಸ್ವಯಂ ಸೇವಕರಲ್ಲಿ ಮರಾವಿ ಕೂಡ ಒಬ್ಬರು. ಪ್ರಯೋಗದಲ್ಲಿ 28 ದಿನಗಳ ಅವಧಿಯಲ್ಲಿ ಎರಡು ಡೋಸ್ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

"3ನೇ ಹಂತದ ಪ್ರಯೋಗದ ಸಮಯದಲ್ಲಿ ಸ್ವಯಂಸೇವಕನು ಲಸಿಕೆ ದಾಖಲಾತಿಗೆ ಸಂಬಂಧಿಸಿದ ಒಳಬರುವ ಮತ್ತು ಹೊರಹೋಗುವ ಮಾನದಂಡಗಳನ್ನು ಪೂರೈಸಿದ್ದಾನೆ. ಅವನು ಮೊದಲ ಡೋಸ್ ಪಡೆದ 7 ದಿನಗಳ ಅವಧಿಯ ಎಲ್ಲ ಮೇಲ್ವಿಚಾರಣೆಯಲ್ಲಿ ಆತ ಆರೋಗ್ಯವಾಗಿದ್ದನೆಂದು ವರದಿಯಾಗಿದೆ. ಆಗ ಲಸಿಕೆ ಯಾವುದೇ ಪ್ರತಿಕೂಲ ಬೆಳವಣಿಗೆ ಕಂಡುಬಂದಿಲ್ಲ,”ಎಂದು ಹೈದರಾಬಾದ್ ಮೂಲದ ಬಯೋಟೆಕ್ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.