ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ | ಬಿಹಾರದ ಬಡವರ ಮನೆಗೂ ಈಗ ವಿದ್ಯುತ್ ಸಂಪರ್ಕವಿದೆ: ನರೇಂದ್ರ ಮೋದಿ

Last Updated 23 ಅಕ್ಟೋಬರ್ 2020, 9:10 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ ಸಾಸಾರಾಮ್ ಬೈದಾ ಮೈದಾನದಲ್ಲಿ ಚುನಾವಣಾ ಪ್ರಚಾರ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಗಯಾದಲ್ಲಿರುವ ಗಾಂಧೀ ಮೈದಾನದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿ ಮಾತನಾಡಿದ್ದಾರೆ.

ಪ್ರಧಾನಿ ಭಾಷಣದ ಮುಖ್ಯಾಂಶಗಳು

ಗೌತಮ ಬುದ್ಧನ ನೆಲದಲ್ಲಿ ನಕ್ಸಲ್‌ವಾದ ಇರುವುದು ಬೇಸರ ತಂದಿದೆ. ಬಿಹಾರದಅಭಿವೃದ್ಧಿಗಾಗಿ ನಾವು ಪ್ರಯತ್ನ ಪಡಬೇಕಾಗಿದೆ.

ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಂಡರೆ ಅವರು ಸೇಡು ತೀರಿಸುತ್ತಾರೆ.

ಹಲವಾರು ವರ್ಷಗಳಿಂದ ಬಡವರು, ವಂಚಿತರು, ದಲಿತರು, ಶೋಷಿತರು, ಹಿಂದುಳಿದವರು, ಅತ್ಯಂತ ಹಿಂದುಳಿದವ ಸಬಲೀಕರಣಕ್ಕೆ ಪ್ರಮುಖ ಸುಧಾರಣೆಗಳನ್ನು ಮಾಡಲಾಗಿದೆ. ಈಗ ಬಡವರಿಗೆ ಮತ್ತು ದೀನದಲಿತರಿಗೆ ಸಂಪೂರ್ಣ ಪ್ರಯೋಜನಗಳನ್ನು ನೀಡುವ ಪ್ರಯತ್ನ ನಡೆಯುತ್ತಿದೆ. ತಂತ್ರಜ್ಞಾನವು ಉತ್ತಮ ಆಡಳಿತಕ್ಕೆ ಅಡಿಪಾಯವಾಗಿದೆ.

ಬಿಹಾರದ ಪ್ರತಿಯೊಂದು ಭಾಗವನ್ನು ನಿರ್ಮಿಸಲು ಬಿಹಾರದವರು ಬೆವರು ಸುರಿಸಿದ್ದಾರೆ.ರಾಜ್ಯ ತನ್ನಿಂದ ತಾನಾಗಿ ಎಂದಿಗೂ ಬೆಳೆಯುವುದಿಲ್ಲ. ಈಗ ಇಲ್ಲಿನ ಜನರಿಗೆ ಮನೆ, ಆರೋಗ್ಯ ಸೌಲಭ್ಯಗಳು, ರಸ್ತೆಗಳು, ಬ್ಯಾಂಕ್ ಖಾತೆಗಳಿವೆ.

ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಬಿಹಾರ ಶಕ್ತಿ ತೋರಿಸಿದೆ. ದೀರ್ಘಕಾಲ ಅಧಿಕಾರದಲ್ಲಿದವರುಈ ಬದಲಾವಣೆಗಳನ್ನು ಬಯಸುವುದಿಲ್ಲ. ಹಾಗಾಗಿ ಪ್ರತಿಯೊಂದು ಸುಧಾರಣಾ ಕ್ರಮಕ್ಕೂ ಆಕ್ಷೇಪಿಸುತ್ತಿದ್ದಾರೆ .

ಸ್ವಾಮಿತ್ವ ಯೋಜನೆ ಗ್ರಾಮದ ಜನರಿಗೆ ಆಸ್ತಿ ಖರೀದಿಯನ್ನು ಸರಾಗಗೊಳಿಸುವ ಮೂಲಕ ಅವರನ್ನು ಸಶಕ್ತಗೊಳಿಸುತ್ತದೆ. ಆರು ರಾಜ್ಯಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.

ಬಿಹಾರ ಬದಲಾಗುತ್ತಿರುವುದನ್ನು ನೀವು ನೋಡಬಹುದು. ಇಲ್ಲಿ ಈಗ ಪ್ರತಿ ಬಡವರ ಮನೆಗೂ ವಿದ್ಯುತ್ ಸಂಪರ್ಕ ಇದೆ,ಬೆಳಕು ಇದೆ.

ಬಡವರನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನ ಬಳಕೆಯಾಗಿದೆ: ನರೇಂದ್ರ ಮೋದಿ
ರ‍್ಯಾಲಿಯನ್ನುದ್ದೇಶಿ ಮಾತನಾಡಿದ ಮೋದಿಬಡವರನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನವನ್ನು ಬಳಸಲಾಗಿದೆ ಮತ್ತು ಅದು ಕೆಲವು ಜನರಿಗೆ ತೊಂದರೆಯಾಗಿದೆ ಎಂದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಮತ್ತು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಇದೀಗ ಸೀಮಿತ ಪ್ರದೇಶಗಳಲ್ಲಿ ಮಾತ್ರ ನಕ್ಸಲರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT