ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಬಿಹಾರದಲ್ಲಿ ಎನ್‌ಡಿಎ ಮುನ್ನಡೆ

Last Updated 10 ನವೆಂಬರ್ 2020, 5:45 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ಸದ್ಯದ ಮುನ್ನಡೆ-ಹಿನ್ನಡೆ ಮಾಹಿತಿ ಗಮನಿಸಿದಾಗ ಎನ್‌ಡಿಎ ಬಹುಮತ ಪಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ.

11 ಗಂಟೆ ಅವಧಿಯಲ್ಲಿ ಎನ್‌ಡಿಎ 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಎಲ್‌ಜೆಪಿ 5, ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದರು.

3ನೇ ಹಂತದಲ್ಲಿ ಮತದಾನವಾದ ಉತ್ತರ ಬಿಹಾರದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಸಾಧನೆ ಉತ್ತಮವಾಗಿದೆ. ಮೊದಲ ಮತ್ತು 2ನೇ ಹಂತದಲ್ಲಿ ಮತದಾನ ನಡೆದ ಮಗಧ ಮತ್ತು ಭೋಜಪುರ ಪ್ರದೇಶದಲ್ಲಿ ಮಹಾಘಟಬಂಧನತ್ತ ಜನರ ಒಲವು ವ್ಯಕ್ತವಾದಂತೆ ಇದೆ.

ಬಿಹಾರದ ಬಹುದೊಡ್ಡ ಪಕ್ಷವಾಗಿ ಆರ್‌ಜೆಡಿ ಹೊರಹೊಮ್ಮುವ ಸಾಧ್ಯತೆಯಿದೆ. ನಂತರದ ಸ್ಥಾನದಲ್ಲಿ ಬಿಜೆಪಿ ಮತ್ತು ಜೆಡಿಯು ಬರುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT