ಮಂಗಳವಾರ, ನವೆಂಬರ್ 24, 2020
20 °C

ಬಹುಮತದತ್ತ ಎನ್‌ಡಿಎ: ಚಿರಾಗ್ ಆಗ್ತಾರಾ ಕಿಂಗ್ ಮೇಕರ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವತ್ತ ದಾಪುಗಾಲು ಇರಿಸಿದ್ದು, ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಕಂಡು ಬಂದಿದೆ.

ಆದರೆ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು ಸಾಧನೆ ಕಳಪೆಯಾಗಿದೆ.

ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ 8 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ರೂಪುಗೊಂಡು, ಚಿರಾಗ್‌ ಅವರ ಪಕ್ಷ ಈ 8 ಸ್ಥಾನಗಳನ್ನು ದಕ್ಕಿಸಿಕೊಂಡರೆ, ಹೊಸ ರಾಜಕೀಯ ಲೆಕ್ಕಾಚಾರಗಳು ಚಾಲ್ತಿಗೆ ಬರಬಹುದು.

ಎನ್‌ಡಿಎ ಮೈತ್ರಿಯಿಂದ ಕೊನೆ ಗಳಿಗೆಯಲ್ಲಿ ಹೊರಬಿದ್ದ ಚಿರಾಗ್‌ನ ಭವಿಷ್ಯಕ್ಕೂ ಇದು ಚಿಮ್ಮುಹಲಗೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

11.20ರ ಸಮಯದಲ್ಲಿ ಎನ್‌ಡಿಎ 129, ಮಹಾಘಟಬಂಧನ್ 103, ಎಲ್‌ಜೆಪಿ 5 ಮತ್ತು ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದರು.

ಪೂರ್ಣ ಮತ ಎಣಿಕೆ ಇನ್ನೂ ಮುಗಿದಿಲ್ಲ. ಅಂತಿಮ ಫಲಿತಾಂಶ ಪ್ರಕಟವಾದ ನಂತರವೇ ಯಾರಿಗೆ ಮತದಾರರ ಆಶೀರ್ವಾದ ಸಿಕ್ಕಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

ಇದನ್ನೂ ಓದಿ | ಬಿಹಾರ ಚುನಾವಣೆ: ಪುಟಿದೆದ್ದ ಎನ್‌ಡಿಎ, ಹಿಂದುಳಿದ ಮಹಾಘಟಬಂಧನ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು