ಸೋಮವಾರ, ಅಕ್ಟೋಬರ್ 25, 2021
25 °C

ಬಟ್ಟೆ ಒಗೆಯುವ ಷರತ್ತು: ಕರ್ತವ್ಯದಿಂದ ದೂರವಿರಲು ನ್ಯಾಯಾಧೀಶರಿಗೇ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ (ಪಿಟಿಐ): ಗ್ರಾಮದ ಎಲ್ಲ ಮಹಿಳೆಯರ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡುವ ಷರತ್ತು ವಿಧಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದ ಸ್ಥಳೀಯ ಕೋರ್ಟ್‌ನ ನ್ಯಾಯಾಧೀಶರಿಗೆ, ಮುಂದಿನ ಆದೇಶದವರೆಗೂ ಕರ್ತವ್ಯದಿಂದ ದೂರ ಉಳಿಯಬೇಕು ಎಂದು ಪಟ್ನಾ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಜಾಂಜರ್‌ಪುರ್ ಉಪವಿಭಾಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಅವಿನಾಶ್‌ ಕುಮಾರ್, ಈಚೆಗೆ ಅತ್ಯಾಚಾರ ಯತ್ನ ಆರೋಪಿಗೆ ಜಾಮೀನು ನೀಡಿದ್ದ ಆದೇಶದಿಂದಾಗಿ ಸುದ್ದಿಗೆ ಗ್ರಾಸವಾಗಿದ್ದರು.

ಕರ್ತವ್ಯದಿಂದ ದೂರವಿರಲು ಸೂಚಿಸಿ ಹೈಕೋರ್ಟ್ ಶುಕ್ರವಾರ ಆಡಳಿತಾತ್ಮಕ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಾಧೀಶರು ಈ ಹಿಂದೆಯೂ ಭಿನ್ನ ರೀತಿಯ ಆದೇಶ ಹೊರಡಿಸಿದ್ದರು ಎನ್ನಲಾಗಿದೆ.

ಅತ್ಯಾಚಾರ ಯತ್ನ: ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ’ಷರತ್ತಿನ ಜಾಮೀನು‘

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು