‘ರೀ… ಬನ್ನಿ ಇಲ್ಲಿ, ಈ ವಿಡಿಯೊ ನೋಡಿದ್ರಾ?’ ಮೊಬೈಲ್ ಫೋನ್ ನೋಡುತ್ತಾ ಕರೆದಳು ಹೆಂಡತಿ.

‘ಏನದು? ರೀಲ್ಸಾ?’ ಎಂದು ಗೊಣಗುತ್ತಾ ಹತ್ತಿರ ಹೋದೆ.

‘ರೀಲ್ಸ್ ಅಲ್ಲ ರೀ ಇದು, ನ್ಯೂಸು. ಬಂಡೀಪುರ ಫಾರೆಸ್ಟ್ ದಾರಿಯಲ್ಲಿ ಹೋಗ್ತಿದ್ದ ವ್ಯಕ್ತಿ ಮೇಲೆ ಆನೆ ಹೇಗೆ ಅಟ್ಯಾಕ್ ಮಾಡಿದೆ ನೋಡ್ರೀ’.

‘ಆ ಪುಣ್ಯಾತ್ಮ ಆನೆ ಜೊತೆ ಸೆಲ್ಫಿ ತಗೊಳೋಕೆ ಹೋಗಿದ್ರಂತೆ’.

‘ಹೌದಾ! ಏನೋ ಒಂದ್ ಫೋಟೊ ತಗೊಂಡು ಸ್ಟೇಟಸ್ ಹಾಕ್ಕೋಬೇಕು ಅಂದ್ಕೊಂಡಿದ್ರೇನೋ ಪಾಪ’.

‘ಏನ್ ಪಾಪ, ಇದನ್ನು ನೋಡು, ಫಾರೆಸ್ಟ್ ಡಿಪಾರ್ಟ್ಮೆಂಟ್ನವರು ಅವರಿಗೆ 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ಯಾರೂ ನನ್ನ ಹಾಗೆ ಕಾಡಲ್ಲಿ ಹೀಗೆಲ್ಲ ಸೆಲ್ಫಿ ತಗೊಳೋಕೆ ಹೋಗಬೇಡಿ, ಫಾರೆಸ್ಟ್ನವರು ಎಲ್ಲಿದ್ದರೂ ನಿಮ್ಮನ್ನ ಹಿಡಿಯದೇ ಬಿಡಲ್ಲ ಅಂತ ಅವರಿಂದ ವಿಡಿಯೊನೂ ಮಾಡಿಸಿದ್ದಾರೆ’.

‘ಸೆಲ್ಫಿ ತಗೊಳೋಕೆ ಹೋದರೆ ಇಷ್ಟೆಲ್ಲ ಅನುಭವಿಸಬೇಕಾ?’

‘ಸೆಲ್ಫಿ ತಗೊಂಡ್ರೆ ಪ್ರಾಬ್ಲಂ ಇಲ್ಲ. ಯಾರ ಜೊತೆ, ಯಾವಾಗ ತಗೊಳ್ತೀವಿ ಅನ್ನೋದು ಮುಖ್ಯ. ಅದಕ್ಕೇ ಅಲ್ವಾ ದೊಡ್ಡವರು ಹೇಳೋದು, ಹೆಂಡತಿ ಜೊತೆ ಮತ್ತು ಪ್ರಾಣಿಗಳ ಜೊತೆ ವ್ಯವಹರಿಸೋವಾಗ ಹುಷಾರಾಗಿರಬೇಕು ಅಂತ’ ಹೆಂಡತಿಯನ್ನು ಕೆಣಕಿದೆ.

‘ಅದ್ಯಾವ ದೊಡ್ಡವರು ಈ ಮಾತು ಹೇಳಿದ್ರು ನಿಮಗೆ’ ಎಂದು ಸಿಟ್ಟು ಮಾಡಿಕೊಂಡ ಹೆಂಡತಿ, ‘ಪಾಪ ಅವರ್ಯಾರೋ ಬಡಪಾಯಿ ಸಿಕ್ಕಿದ್ದಾರೆ ಅಂತ ಅವರಿಗೆ ದಂಡ ಹಾಕಿ, ತಪ್ಪೊಪ್ಪಿಗೆ ವಿಡಿಯೊ ಮಾಡಿಸಿದ್ದಾರೆ... ಅದೇ ಪ್ರಭಾವಿಗಳು, ಗಣ್ಯರು ಇಂಥದ್ದೇ ತಪ್ಪು ಮಾಡಿದ್ರೆ ಹೀಗೇ ವಿಡಿಯೊ ಮಾಡಿಸ್ತಿದ್ರಾ?’ ಗಂಭೀರವಾಗಿ ಕೇಳಿದಳು.

‘ಅದನ್ನ ನೀನು ಚಾಟ್ಜಿಪಿಟಿಯಲ್ಲಿ ಪೊಲೀಸ್ ಡಿಪಾರ್ಟ್ಮೆಂಟ್ನವರನ್ನ ಕೇಳು’.

‘ಚಾಟ್ಜಿಪಿಟಿಯಲ್ಲೇ ಕೇಳಿದೆ ರೀ...’

‘ಏನಂತ ಉತ್ತರ ಬಂತು?’

‘ಗೊತ್ತಿಲ್ಲ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.