ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಫಲಿತಾಂಶ: ಹಿಲ್ಸಾದಲ್ಲಿ 12 ಮತಗಳ ಅಂತರದಿಂದ ಗೆದ್ದ ಜೆಡಿಯು ಅಭ್ಯರ್ಥಿ

Last Updated 11 ನವೆಂಬರ್ 2020, 8:11 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹಿಲ್ಸಾ ಕ್ಷೇತ್ರದಿಂದ ಆಡಳಿತಾರೂಢ ಜೆಡಿಯು ಪಕ್ಷದ ಅಭ್ಯರ್ಥಿಯು ಕೇವಲ 12 ಮತಗಳ ಅಂತರದಿಂದ ಜಯಗಳಿಸಿರುವುದು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ತಿಳಿದುಬಂದಿದೆ.

ಜೆಡಿಯು ಅಭ್ಯರ್ಥಿ ಕೃಷ್ಣಮುರಾರಿ ಶರಣ್ ಅಲಿಯಾಸ್ ಪ್ರೇಮ್ ಮುಖಿಯಾ ಅವರು 61,848 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ, ಆರ್‌ಜೆಡಿ ಅಭ್ಯರ್ಥಿ ಅತ್ರಿ ಮುನಿ ಅಲಿಯಾಸ್ ಶಕ್ತಿ ಸಿಂಗ್ ಯಾದವ್‌ಗೆ 61,836 ಮತಗಳು ದೊರೆತಿವೆ.

ಹಿಲ್ಸಾ ಕ್ಷೇತ್ರದ ಫಲಿತಾಂಶವನ್ನು ಚುನಾವಣಾ ಆಯೋಗ ಮಂಗಳವಾರ ತಡರಾತ್ರಿ ಘೋಷಿಸಿತ್ತು. ‘ಫಲಿತಾಂಶ ಘೋಷಣೆಯಾಗಿದೆ. ಗೆಲುವಿನ ಅಂತರ 12 ಮತಗಳು’ ಎಂದು ಆಯೋಗ ತಿಳಿಸಿತ್ತು.

ರಾತ್ರಿ 10 ಗಂಟೆ ವೇಳೆಗೂ ಹಿಲ್ಸಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದೆ ಎಂದೇ ಆಯೋಗದ ವೆಬ್‌ಸೈಟ್‌ನಲ್ಲಿ ತೋರಿಸುತ್ತಿತ್ತು. ಮತ ಎಣಿಕೆ ಪ್ರಕ್ರಿಯೆಯಲ್ಲಿ ವಂಚನೆ ನಡೆಯುತ್ತಿದೆ ಎಂದು ಆರ್‌ಜೆಡಿ ಆರೋಪಿಸಿತ್ತು.

‘ಶಕ್ತಿ ಸಿಂಗ್ ಅವರು 547 ಮತಗಳಿಂದ ಗೆದ್ದಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಘೋಷಿಸಿದ್ದರು. ಗೆಲುವಿನ ಪ್ರಮಾಣಪತ್ರ ನೀಡಲು ಕಾಯುವಂತೆ ಅವರಿಗೆ ತಿಳಿಸಲಾಯಿತು. ಆದರೆ, ಮುಖ್ಯಮಂತ್ರಿಗಳ ಮನೆಯಿಂದ ದೂರವಾಣಿ ಕರೆ ಬಂದ ಬಳಿಕ ದಿಢೀರ್ ಹೇಳಿಕೆ ಬದಲಾಯಿಸಿದ ಅವರು, ಅಂಚೆ ಮತಗಳನ್ನು ರದ್ದುಗೊಳಿಸಿದ ಕಾರಣ ಆರ್‌ಜೆಡಿ ಅಭ್ಯರ್ಥಿ ಸೋತಿದ್ದಾರೆ ಎಂದರು’ ಎಂದು ಆರ್‌ಜೆಡಿ ಟ್ವೀಟ್ ಮೂಲಕ ದೂರಿದೆ.

ಆದರೆ, ಮತಎಣಿಕೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಚುನಾವಣಾ ಆಯೋಗ ಮಂಗಳವಾರ ರಾತ್ರಿಯೇ ಸ್ಪಷ್ಟನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT