ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಎರಡನೇ ಹಂತದಲ್ಲಿ ಶೇ 59 ರಷ್ಟು ಮತದಾನ

Last Updated 3 ನವೆಂಬರ್ 2020, 14:29 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಶೇ 59 ರಷ್ಟು ಮತದಾನವಾಗಿದೆ.

ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಸಂಜೆ 6 ಗಂಟೆಯವರೆಗೂ ನಡೆಯಿತು. ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು. ರಾಜಧಾನಿ ಪಟ್ನಾದಲ್ಲಿ ಶೇ 46ರಷ್ಟು ಮತದಾನವಾದರೆ ಮುಜಾಫರ್‌ಪುರದಲ್ಲಿ ಶೇ 59 ರಷ್ಟು ಮತದಾನವಾಗಿದೆ.

17 ಜಿಲ್ಲೆಗಳ ವ್ಯಾಪ್ತಿಗೆ ಬರುವ, 94 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ನಿತೀಶ್‌ ಕುಮಾರ್ ಸಂಪುಟದ ನಾಲ್ವರು ಸಚಿವರು, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಹಾಗೂ ಕೆಲವು ಗಣ್ಯರು ಮತ್ತು ಅವರ ಕುಟುಂಬದ ಸದಸ್ಯರು, ಸಂಬಂಧಿಕರು ಕಣದಲ್ಲಿದ್ದರು.

94 ಕ್ಷೇತ್ರಗಳಲ್ಲಿ 56 ಆರ್‌ಜೆಡಿ, 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಸಿಪಿಐ ಹಾಗೂ ಸಿಪಿಎಂ ತಲಾ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಉಳಿದ ಕ್ಷೇತ್ರಗಳನ್ನು ಘಟಬಂಧನದ ಇತರ ಪಕ್ಷಗಳಿಗೆ ನೀಡಲಾಗಿದೆ.

ಎನ್‌ಡಿಎ ಕೂಟದಿಂದ 46 ಕ್ಷೇತ್ರಗಳಲ್ಲಿ ಬಿಜೆಪಿ, 43 ಕ್ಷೇತ್ರಗಳಲ್ಲಿ ಜೆಡಿಯು, ಐದು ಕ್ಷೇತ್ರದಲ್ಲಿ ವಿಐಪಿಯ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಎರಡೂ ಬಣಗಳಿಂದ ಹೊರಗೆ ಉಳಿದಿರುವ ಎಲ್‌ಜೆಪಿಯು 52 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಅ. 28ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮೂರನೇ ಹಂತದ ಚುನಾವಣೆಯು ನ.7ರಂದು ನಡೆಯಲಿದ್ದು ಅಂದು 78 ಕ್ಷೇತ್ರಗಳಿಗೆ ಮತದಾನ ನಡೆಯುವುದು. ನ. 10ರಂದು ಫಲಿತಾಂಶ ಘೋಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT