ಭಾನುವಾರ, ಅಕ್ಟೋಬರ್ 2, 2022
18 °C

ಬಿಲ್ಕಿಸ್‌ ಅತ್ಯಾಚಾರಿಗಳು ಬ್ರಾಹ್ಮಣರು, ಸಂಸ್ಕಾರವಂತರು: ಬಿಜೆಪಿ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಅವರೆಲ್ಲರೂ ಉತ್ತಮ ಸಂಸ್ಕಾರವಂತರು ಎಂದು ಗೋಧ್ರಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ. ರವುಲಜಿ ಅವರು ಹೇಳಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.  ಅತ್ಯಾಚಾರಿಗಳ ಬಿಡುಗಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಚಿಸಲಾಗಿದ್ದ ಸಮಿತಿಯಲ್ಲಿ ರವುಲಜಿ ಅವರೂ ಇದ್ದರು.

‘ಅವರು ಅಪರಾಧ ಎಸಗಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಅಪರಾಧ ಎಸಗಲು ಒಂದು ಉದ್ದೇಶ ಇರುತ್ತದೆ. ಉತ್ತಮ ಸಂಸ್ಕಾರವಂತರು ಎಂಬುದಾಗಿ ಬ್ರಾಹ್ಮಣರು ಗುರುತಿಸಿಕೊಂಡಿದ್ದಾರೆ. ಬಿಲ್ಕಿಸ್‌ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಈಗ ಬಿಡುಗಡೆಯಾದವರು ಬ್ರಾಹ್ಮಣ ಸಮುದಾಯದವರು. ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಯಾರೋ ದುರುದ್ದೇಶ ಹೊಂದಿದ್ದಂತೆ ತೋರುತ್ತಿದೆ’ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.

*

ಅತ್ಯಾಚಾರಿಗಳನ್ನು ಕ್ಷಮಾಪಣೆ ನೀತಿ ಅ‌ನ್ವಯ ಬಿಡುಗಡೆ ಮಾಡಿರುವುದು ದೇಶದ ನ್ಯಾಯಾಂಗ ವ್ಯವಸ್ಥೆ ಮೇಲಿನ ನನ್ನ ನಂಬಿಕೆಯನ್ನೇ ಬುಡಮೇಲು ಮಾಡಿದೆ.
–ಬಿಲ್ಕಿಸ್ ಬಾನು, ಸಂತ್ರಸ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು