ಗುರುವಾರ , ಮಾರ್ಚ್ 23, 2023
21 °C

ತೈಲ ಬೆಲೆ ₹ 50ಕ್ಕೆ ಇಳಿಸಲು ಬಿಜೆಪಿಯನ್ನು ಸೋಲಿಸಬೇಕು: ಸಂಜಯ್ ರಾವತ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಇಂಧನ ಬೆಲೆಯನ್ನು ಲೀಟರ್‌ಗೆ ₹50ಕ್ಕೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು’ ಎಂದು ಶಿವಸೇನಾದ ಸಂಸದ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಕೇಂದ್ರ ಸರ್ಕಾರವು ಇಂಧನದ ಬೆಲೆಯನ್ನು ಲೀಟರ್‌ಗೆ ₹ 5 ಕಡಿಮೆ ಮಾಡಿದೆ. ₹50 ಕಡಿಮೆ ಮಾಡಬೇಕಾದರೆ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು. ಸಾಲ ಮಾಡಿ ಜನರು ದೀಪಾವಳಿಯನ್ನು ಆಚರಿಸುವಂತಾಗಿದೆ. ಹಣದುಬ್ಬರದಿಂದಾಗಿ ಹಬ್ಬದ ವಾತಾವರಣವೂ ಇಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ ₹ 5 ಮತ್ತು ₹10 ಕಡಿತಗೊಳಿಸಿದೆ. ಆದರೆ, ಇದರಿಂದ ಯಾವ ಉದ್ದೇಶವೂ ಈಡೇರದು. ಕನಿಷ್ಠ ₹25 ಇಳಿಸಬೇಕಾಗಿತ್ತು. ನಂತರ ₹ 50 ಇಳಿಸಬೇಕಾಗಿತ್ತು’ ಎಂದು ರಾವತ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು