ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುವ ನೆಚ್ಚಿನ ಪಕ್ಷವಾಗಿದೆ. ಆದರೆ 108 ಸ್ಥಾನ ಕಡಿಮೆಯಾಗುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷದ ಗಳಿಕೆ ಹೆಚ್ಚಾಗಲಿದೆ ಎಂದು ‘ಎಬಿಪಿ–ಸಿ–ವೋಟರ್–ಐಎಎನ್‌ಎಸ್’ ಸಮೀಕ್ಷಾ ವರದಿ ಹೇಳಿದೆ.

ಉತ್ತರಾಖಂಡ ಮತ್ತು ಪಂಜಾಬ್‌ಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಯುತವಾಗಲಿದೆ ಎಂದೂ ಸಮೀಕ್ಷೆ ತಿಳಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯೇ ಉತ್ತರ ಪ್ರದೇಶದಲ್ಲಿ ಗೆಲ್ಲುವ ನೆಚ್ಚಿನ ಪಕ್ಷವಾಗಿದೆ. ಸಮಾಜವಾದಿ ಪಕ್ಷವೂ ಬೆಳೆಯುತ್ತಿದ್ದು, ಉಭಯ ಪಕ್ಷಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಓದಿ:ಚುನಾವಣಾ ರಾಜ್ಯಗಳ ಶೇ 41.1 ಜನರ ಒಲವು ಮೋದಿ ಪರ: ಸಮೀಕ್ಷೆ

ಚುನಾವಣೆ ನಡೆಯಲಿರುವ ರಾಜ್ಯಗಳ 690 ಕ್ಷೇತ್ರಗಳ 1,07,193 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 217 ಸ್ಥಾನ ಗಳಿಸಲಿವೆ. ಇದು ಕಳೆದ ಬಾರಿಗಿಂತ (325) 108 ಕಡಿಮೆಯಾಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವರ್ಚಸ್ಸು ವೃದ್ಧಿಸುತ್ತಿದೆ. ಅವರ ಪಕ್ಷವು 156 ಸ್ಥಾನ ಗಳಿಸಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಮಧ್ಯೆಯೇ ನೇರ ಹಣಾಹಣಿ ಏರ್ಪಡಲಿದೆ. ಎರಡು ಪಕ್ಷಗಳ ನಡುವಣ ಅಂತರ ಸುಮಾರು 60ರಷ್ಟು ಇರಬಹುದು ಎಂದು ಸಮೀಕ್ಷೆ ತಿಳಿಸಿದೆ.

ಓದಿ:ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಹಾನಿ ಮಾಡಲಿದೆ ಲಖಿಂಪುರ ಘಟನೆ: ಸಮೀಕ್ಷೆ

ಉತ್ತರಾಖಂಡದಲ್ಲಿ 38 ಸ್ಥಾನಗಳೊಂದಿಗೆ ಬಿಜೆಪಿಯೇ ಮುಂಚೂಣಿಯಲ್ಲಿದೆ. ಆದರೆ, ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ 57ಕ್ಕಿಂತ ಈ ಬಾರಿ 19 ಸ್ಥಾನ ಕಡಿಮೆ ಇದೆ. ಇಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದ್ದು, ಈ ಬಾರಿ 21 ಸ್ಥಾನ ಹೆಚ್ಚು ಗಳಿಸಿ ತನ್ನ ಬಲವನ್ನು 32ಕ್ಕೆ ಹೆಚ್ಚಿಸಿಕೊಳ್ಳಲಿದೆ.

ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವಣ ಅಂತರ ಕಡಿಮೆಯಾಗಲಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 51 ಸ್ಥಾನ ಗಳಿಸಲಿದೆ. ಕಾಂಗ್ರೆಸ್ 46 ಸ್ಥಾನ ಗಳಿಸಲಿದೆ. ಕಳೆದ ಬಾರಿ ಕಾಂಗ್ರೆಸ್ 77 ಸ್ಥಾನ ಗಳಿಸಿತ್ತು. ಅಕಾಲಿ ದಳ 20 ಸ್ಥಾನಗಳೊಂದಿಗೆ 3ನೇ ಸ್ಥಾನದಲ್ಲಿದೆ.

40 ಸದಸ್ಯ ಬಲದ ವಿಧಾನಸಭೆಯ ಗೋವಾದಲ್ಲಿ 21 ಸ್ಥಾನದೊಂದಿಗೆ ಬಿಜೆಪಿಯೇ ಮುಂಚೂಣಿಯಲ್ಲಿದೆ. ಸಮೀಕ್ಷೆಯಲ್ಲಿ ಇತರರಿಗೆ 10, ಎಎಪಿಗೆ 5 ಹಾಗೂ ಕಾಂಗ್ರೆಸ್‌ಗೆ 4 ಸ್ಥಾನ ದೊರೆತಿವೆ.

60 ಸದಸ್ಯ ಬಲದ ವಿಧಾನಸಭೆಯ ಮಣಿಪುರದಲ್ಲಿ 27 ಸ್ಥಾನಗಳೊಂದಿಗೆ ಬಿಜೆಪಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್ 22 ಸ್ಥಾನ ಗಳಿಸಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.