ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಬ್ಯಾನರ್ಜಿಯನ್ನು ಆಲಿಂಗಿಸುವ ಮೂಲಕ ಕೊರೊನಾ ಹರಡುತ್ತಿದ್ದೆ ಎಂದ ಬಿಜೆಪಿ ನಾಯಕ

ಸೋಂಕಿತರ ಸಂಕಷ್ಟ ಮಮತಾಗೆ ಗೊತ್ತಿಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನುಪಮ್‌ ಹಝ್ರಾ
Last Updated 28 ಸೆಪ್ಟೆಂಬರ್ 2020, 12:15 IST
ಅಕ್ಷರ ಗಾತ್ರ

ಬಾರೈಪುರ/ಸಿಲಿಗುರಿ: ‘ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ಳುವ ಮೂಲಕ, ಅವರಿಗೆ ಕೋವಿಡ್‌ 19 ಸೋಂಕಿನಿಂದ ಬಳಲುವ ಕುಟುಂಬದವರ ನೋವನ್ನು ಅರ್ಥ ಮಾಡಿಸುತ್ತಿದ್ದೆ‘ ಎಂದು ನೂತನ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಝ್ರಾ ಹೇಳಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಬಾರೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದಹಝ್ರಾ ವಿರುದ್ಧ ಸಿಲಿಗುರಿ ಠಾಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪ್ರಕರಣ ದಾಖಲಿಸಿದೆ.

‘ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕಿತರನ್ನು ಬಹಳ ದಾರುಣವಾಗಿ ನಡೆಸಿಕೊಳ್ಳಲಾಗುತ್ತಿದೆ‘ ಎಂದು ಆರೋಪಿಸಿರುವ ಹಝ್ರಾ, ‘ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಸೀಮೆ ಎಣ್ಣೆ ಬಳಸುತ್ತಾರೆ. ನಾವು ಸತ್ತ ನಾಯಿ, ಬೆಕ್ಕುಗಳಿಗೂ ಹೀಗೆ ಮಾಡುವುದಿಲ್ಲ‘ ಎಂದು ಮಮತಾ ಬ್ಯಾನರ್ಜಿ ಅವರ ಆಡಳಿತವನ್ನು ಟೀಕಿಸಿದ್ದಾರೆ.

'ನಮ್ಮ ಕಾರ್ಯಕರ್ತರು ಕೊರೊನಾಕ್ಕಿಂತ ದೊಡ್ಡ ಶತ್ರುವಿನ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಅವರು (ಬಿಜೆಪಿ ಕಾರ್ಯಕರ್ತರು) ಮಾಸ್ಕ್ ಧರಿಸದೆ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುವುದಾದರೆ ಮಾಸ್ಕ್ ಧರಿಸದೆಯೇ ಕೋವಿಡ್ 19 ವಿರುದ್ಧವೂ ಹೋರಾಡಬಹುದು ಎಂದು ಅವರು ಭಾವಿಸುತ್ತಾರೆ' ಎಂದು ಹಝ್ರಾ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದರಾದ್ದ ಹಝ್ರಾ, ಕಳೆದ ವರ್ಷ ಬಿಜೆಪಿ ಸೇರಿದ್ದಾರೆ.

ಹಝ್ರಾ ಅವರ ಹೇಳಿಕೆಯನ್ನು ಖಂಡಿಸಿರುವ ಟಿಎಂಸಿ ನಾಯಕ ಸುಗತೊ ರಾಯ್, ‘ ಬಿಜೆಪಿಯವರಷ್ಟೇ ಇಂಥ ಮಾತುಗಳನ್ನಾಡಲು ಸಾಧ್ಯ. ಇದು ಬಿಜೆಪಿಯವರ ಮನಸ್ಥಿತಿಯನ್ನು ತೋರಿಸುತ್ತದೆ‘ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಹೇಳಿಕೆಯ ನಂತರ ಹಝ್ರಾ ಅವರಿಂದ ಅಂತರ ಕಾಯ್ದುಕೊಂಡಿರುವ ರಾಜ್ಯ ಬಿಜೆಪಿ ಘಟಕ, ‘ಪಕ್ಷ ಇಂಥ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ‘ ಎಂದು ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT