ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019-20ರಲ್ಲಿ ಬಿಜೆಪಿ ಗಳಿಸಿರುವ ಒಟ್ಟು ವಾರ್ಷಿಕ ಆದಾಯ ಎಷ್ಟು ಗೊತ್ತಾ?

Last Updated 10 ಆಗಸ್ಟ್ 2021, 15:51 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2019–2020ನೇ ಹಣಕಾಸು ವರ್ಷದಲ್ಲಿ ಬಿಜೆಪಿಯ ಆದಾಯ ₹3,623 ಕೋಟಿಗೂ ಅಧಿಕ. ಈ ಪೈಕಿ ₹ 2,555 ಕೋಟಿ ಚುನಾವಣಾ ಬಾಂಡ್‌ ಮೂಲಕ ಬಂದಿದೆ ಎಂದು ಪಕ್ಷವು ತಿಳಿಸಿದೆ.

ಲೆಕ್ಕಪರಿಶೋಧನೆಗೆ ಒಳಪಟ್ಟಿರುವ 2019–20ನೇ ವರ್ಷದ ಲೆಕ್ಕಪತ್ರದ ವಿವರಗಳನ್ನು ಪಕ್ಷವು ಚುನಾವಣಾ ಅಯೋಗಕ್ಕೆ ಸಲ್ಲಿಸಿದ್ದು, ಆಯೋಗವು ಈ ವಿವರಗಳನ್ನು ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.

ಲೆಕ್ಕಪತ್ರದ ವಿವರಗಳ ಪ್ರಕಾರ, ಆ ವರ್ಷದಲ್ಲಿ ಬಿಜೆಪಿಯ ಒಟ್ಟು ಆದಾಯ ₹ 3623 ಕೋಟಿ ಹಾಗೂ ವೆಚ್ಚ ₹1651 ಕೋಟಿ ಎಂದು ಪಕ್ಷವು ದಾಖಲಿಸಿದೆ.

ಚುನಾವಣೆ ಮತ್ತು ಸಾಮಾನ್ಯ ಪ್ರಚಾರ ಉದ್ದೇಶಗಳಿಗಾಗಿ ಆ ಸಾಲಿನಲ್ಲಿ ಮಾಡಿರುವ ಒಟ್ಟು ವೆಚ್ಚ ₹ 1,352.92 ಕೋಟಿ. ಈ ಪೈಕಿ ಜಾಹೀರಾತು ಉದ್ದೇಶಕ್ಕಾಗಿಯೇ ಬಿಜೆಪಿ ₹ 400 ಕೋಟಿಗೂ ಅಧಿಕ ಮೊತ್ತ ವಿನಿಯೋಗಿಸಿದೆ.

ಲೆಕ್ಕಪರಿಶೋಧನೆಗೆ ಒಳಪಟ್ಟ ಆದಾಯ–ವೆಚ್ಚದ ವಿವರಗಳನ್ನು ಬಿಜೆಪಿ ಜುಲೈ 22ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಆಯೋಗವುಅದನ್ನು ಈಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

2019–20ನೇ ಹಣಕಾಸು ವರ್ಷದಲ್ಲಿ ಕಾಂಗ್ರೆಸ್‌ ಪಕ್ಷವು ₹29.25 ಕೋಟಿ ಅನ್ನು ಚುನಾವಣಾ ಬಾಂಡ್‌ಗಳ ಮೂಲಕ ಪಡೆದುಕೊಂಡಿದೆ. ಇದೇ ಅವಧಿಯಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ₹ 100.46 ಕೋಟಿ, ಡಿಎಂಕೆ ಪಕ್ಷಕ್ಕೆ ₹ 45 ಕೋಟಿ, ಶಿವಸೇನೆಗೆ ₹ 41 ಕೋಟಿ ಹಾಗೂ ರಾಷ್ಟ್ರೀಯ ಜನತಾದಳ ಪಕ್ಷಕ್ಕೆ ₹ 2.5 ಕೋಟಿ ಚುನಾವಣಾ ಬಾಂಡ್‌ನ ಸ್ವರೂಪದಲ್ಲಿ ಬಂದಿದೆ ಎಂದು ಆಯೋಗವು ವಿವರಗಳನ್ನು ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT